ಸಂಬಲಪುರ (ಓರಿಸ್ಸಾ) ಇಲ್ಲಿ ನಡೆದ ಹನುಮಾನ ಜಯಂತಿಯ ಮೆರವಣಿಗೆಯ ಮೇಲಿನ ದಾಳಿ ಪೂರ್ವ ಯೋಜಿತ – ಪೊಲೀಸ

ಭವನೇಶ್ವರ (ಓರಿಸ್ಸಾ) – ಓರಿಸ್ಸಾದ ಸಂಬಲಪುರನಲ್ಲಿ ಎಪ್ರಿಲ್ 14 ರಂದು ಹನುಮಾನ ಜಯಂತಿಯ ನಿಮಿತ್ತ ನಡೆಸಲಾಗಿದ್ದ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ಆಕ್ರಮಣ ನಡೆಸಿದ್ದರು. ಪೊಲೀಸರು ಈ ಆಕ್ರಮಣ ಪೂರ್ವಯೋಜಿತವಾಗಿದೆಯೆಂದು ಹೇಳಿದ್ದಾರೆ. ಈ ದಾಳಿ ಧಾರ್ಮಿಕವಾಗಿರಲಿಲ್ಲ ಎಂದು ಕೂಡ ಪೊಲೀಸರು ಹೇಳಿದ್ದಾರೆ. ಈ ದಾಳಿಯಲ್ಲಿ ಚಂದ್ರ ಮಿರ್ಝಾ ಹೆಸರಿನ ವ್ಯಕ್ತಿ ಸಾವನ್ನಪ್ಪಿದ್ದನು.

ಪೊಲೀಸರ ಪ್ರಕಾರ, ಕೆಲವು ಜನರು ತಮ್ಮ ಮನೆಯಲ್ಲಿ ಲಾಠಿ ಮತ್ತು ಕಲ್ಲುಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡಿದ್ದರು. ಕೆಲವರು ಮನೆಯ ಮೇಲೆ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಮನೆಗಳ ಶೋಧನೆ ನಡೆಸಿದಾಗ ಈ ಎಲ್ಲ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು. ಪೊಲೀಸರು 100 ಗಲಭೆಕೋರರ ಗುರುತು ಹಿಡಿದಿದ್ದು, ಇಲ್ಲಿಯವರೆಗೆ 26 ಜನರನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಈ ರೀತಿಯ ಸಂಚನ್ನು ಯಾರು ರೂಪಿಸಿದ್ದಾರೆ ಎನ್ನುವುದು ಗುಪ್ತಚಾರರಿಗೆ ಹೇಗೆ ತಿಳಿಯುವುದಿಲ್ಲ ?