ವೇದ ಮತ್ತು ಪುರಾಣಗಳನ್ನು ಅಧ್ಯಯನ ಮಾಡಲು ವಿಶೇಷ ಅಂಕಗಳನ್ನು ನೀಡಲಾಗುವುದು ! – ವಿದ್ಯಾಪೀಠದ ಅನುದಾನ ಆಯೋಗ

ನವ ದೆಹಲಿ – ವಿದ್ಯಾಪೀಠದ ಅನುದಾನ ಆಯೋಗವು ‘ನ್ಯಾಶನಲ್ ಕ್ರೆಡಿಟ್ ಫ್ರೇಮ್ ವರ್ಕ್’ ಕರಡನ್ನು ಪ್ರಕಟಿಸಿದೆ. ಅದರಲ್ಲಿ ‘ಅಂಕ ಪದ್ಧತಿ (’ಕ್ರೆಡಿಟ್ ಸಿಸ್ಟಮ್’ ಬಗ್ಗೆ) ಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಪರಿಚಯಿಸಿದೆ. ಈ ನಿಯಮಗಳ ಪ್ರಕಾರ, ವಿದ್ಯಾರ್ಥಿಗಳಿಗೆ ವೇದಗಳು, ಪುರಾಣಗಳು, ಮೀಮಾಂಸಾ, ಧರ್ಮಶಾಸ್ತ್ರ, ಜ್ಯೋತಿಷ್ಯ, ವೇದಾಂಗ ಮುಂತಾದ ಭಾರತೀಯ ಜ್ಞಾನ ಸಂಪ್ರದಾಯಗಳ ವಿವಿಧ ಶಾಖೆಗಳ ಅಧ್ಯಯನ ಮಾಡಿದರೆ ವಿವಿಧ ಕ್ರೆಡಿಟ್ ಅಂಕಗಳನ್ನು ನೀಡಲಾಗುತ್ತದೆ. ಭಾರತೀಯ ಜ್ಞಾನ ಪರಂಪರೆಯ ೧೪ ವಿದ್ಯೆಗಳು, ೬೪ ಕಲೆಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೂ ಅಂಕವನ್ನು ನೀಡಲಾಗುವುದು ಎಂದು ಹೇಳಿದೆ.