ನವ ದೆಹಲಿ – ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಭಾರತೀಯರಲ್ಲಿ ಭಾಷೆ, ಜಾತಿ, ಲಿಂಗ ಮತ್ತು ಧರ್ಮದ ಆಧಾರದಲ್ಲಿ ಬಿರುಕು ಮೂಡಿಸುವವರು ನಿಜವಾದ `ದೇಶದ್ರೋಹಿಗಳು’ ಆಗಿದ್ದಾರೆ. ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಹೇಳಿದ್ದಾರೆ. ಭಾರತರತ್ನ ಬಾಬಾಸಾಹೇಬ ಆಂಬೇಡಕರ ಇವರ 132 ನೇ ಜಯಂತಿನಿಮಿತ್ತ ವಾರ್ತಾ ಪತ್ರಿಕೆಯಲ್ಲಿ ಬರೆದಿರುವ ಒಂದು ಲೇಖನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಸೋನಿಯಾ ಗಾಂಧಿಯವರು,
1. `ರಾಜ್ಯಾಡಳಿತವನ್ನು ನಿರ್ವಹಿಸುವವರ ವರ್ತನೆಯ ಮೇಲೆ ಸಂವಿಧಾನದ ಯಶಸ್ಸು ಅವಲಂಬಿಸಿರುತ್ತದೆ’, ಬಾಬಾಸಾಹೇಬರ ದಾರ್ಶನಿಕ ಎಚ್ಚರಿಕೆಯನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇಂದು ಸರಕಾರ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಅವುಗಳನ್ನು ನಾಶಪಡಿಸುತ್ತಿದೆ. ಆದ್ದರಿಂದ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಮತ್ತು ನ್ಯಾಯ ಇವುಗಳ ಅಡಿಪಾಯ ಕುಸಿಯುತ್ತಿದೆ.
2. ಬಾಬಾಸಾಹೇಬರು ಅವರ ಕೊನೆಯ ಭಾಷಣದಲ್ಲಿ ಜಾತಿ ವ್ಯವಸ್ಥೆಯು ಸಹೋದರತ್ವದ ಮೂಲಕ್ಕೆ ಯಾವ ರೀತಿ ಕೊಡಲಿಯೇಟು ಕೊಡುತ್ತದೆಯೆಂದು ಸವಿಸ್ತಾರವಾಗಿ ಹೇಳಿದ್ದಾರೆ. ಅವರು ಇದನ್ನು `ದೇಶದ್ರೋಹಿ’ ಎಂದು ಕರೆದಿದ್ದಾರೆ. ಕಾರಣ ಅದು ಪರಕೀಯತೆ, ಮತ್ಸರ, ದ್ವೇಷವನ್ನು ನಿರ್ಮಾಣ ಮಾಡುತ್ತದೆ ಮತ್ತು ಭಾರತೀಯರನ್ನು ಪರಸ್ಪರರಲ್ಲಿ ವಿಭಜಿಸುತ್ತದೆ. (ಆದ್ದರಿಂದಲೇ ಬಾಬಾಸಾಹೇಬರು `ಮೀಸಲಾತಿಯನ್ನು 10 ವರ್ಷದಲ್ಲಿ ಮುಕ್ತಾಯಗೊಳಿಸಬೇಕು’, ಎಂದು ಹೇಳಿದ್ದರು, ಆದರೂ ದೇಶದಲ್ಲಿ ಸುಮಾರು 50 ವರ್ಷಗಳ ವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ಸಿನ ರಾಜಕಾರಣಿಗಳು ಜಾತಿಯಾಧಾರಿತ ಮೀಸಲಾತಿ ಮತ್ತು ಇತರೆ ಸೌಲಭ್ಯಗಳನ್ನು ಮುಂದುವರಿಸಿ ಜಾತೀ ವ್ಯವಸ್ಥೆಯನ್ನು ಪೋಷಿಸಿದರು. ಇದರ ಉತ್ತರವನ್ನು ಸೋನಿಯಾ ಗಾಂಧಿಯವರು ಭಾರತೀಯರಿಗೆ ನೀಡಬೇಕು ! – ಸಂಪಾದಕರು)
"Today, the regime in power is misusing and subverting the institutions of the Constitution, and weakening its foundations of liberty, equality, fraternity and justice."
Smt. Sonia Gandhi, Chairperson of the Congress Parliamentary Party, pays tribute to Dr. B.R. Ambedkar. pic.twitter.com/PgTUunvoLD
— Priyanka Gandhi Vadra (@priyankagandhi) April 14, 2023
ಸಂಪಾದಕೀಯ ನಿಲುವು
|