ಬೆಂಗಳೂರು – ನೆರೆ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದೂ ಅದರ ಪರಿಣಾಮ ರಾಜ್ಯದಲ್ಲೂ ಕಂಡುಬರುತ್ತಿದೆ. ಆದರೆ, ಸರಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಜನರು ನಿರೀಕ್ಷಿಸುತ್ತಿದ್ದಾರೆ.
(ಸೌಜನ್ಯ : News18 Kannada)
ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಮದ ದೆಹಲಿ, ಹರಿಯಾಣ, ಪಾಂಡಿಚೇರಿ, ರಾಜಸ್ಥಾನ, ಕೇರಳ, ಮುಂಬಯಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ ಜೊತೆಗೆ ಮಾಸ್ಕ್ ಗಳನ್ನು ಅನಿವಾರ್ಯಗೊಳಿಸಲಾಗಿದೆ. ಜೊತೆಗೆ ಈ ಕುರಿತು ಸುತ್ತೋಲೆಯನ್ನೂ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿಕೆ ಅವರು ಮಾತನಾಡಿ, ಮಾಸ್ಕ್ ಬಳಕೆಯನ್ನು ಜಾರಿಗೊಳಿಸುವ ಕುರಿತು ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ ಎಂದು ಹೇಳಿದ್ದಾರೆ.