ಗಾಯನ ಕಾರ್ಯಕ್ರಮದಲ್ಲಿ ಗಾಯಕ ಹಾಡುವ ಬದಲಾಗಿ ಕೇವಲ ತುಟಿಗಳ ಚಲನವಲನೆ ಮಾಡುತ್ತಾನೆ ! – ಗಾಯಕ ಪಲಾಶ ಸೇನ ಇವರ ದಾವೆ

ಮುಂಬಯಿ – ಇಂದಿನ ಗಾಯಕರು ಸಭಾಗೃಹದ ಕಾರ್ಯಕ್ರಮಗಳಲ್ಲಿ ಹಾಡುವುದರ ಬದಲು ಕೇವಲ ತುಟಿಗಳ ಚಲನವಲನ ಮಾಡುತ್ತಾರೆ ಮತ್ತು ಹಿನ್ನೆಲೆಯಲ್ಲಿ ಆ ಹಾಡಿನ ಆಡಿಯೋ ಹಚ್ಚುತ್ತಾರೆ ಎಂದು ಗಾಯಕ ಪಲಾಶ ಸೇನರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಇದರೊಂದಿಗೆ ಅವರು ದೂರದರ್ಶನದಿಂದ ಆಯೋಜಿಸಲಾಗಿರುವ `ರಿಯಾಲಿಟಿ ಶೋ’ (ಸ್ಪರ್ಧಾತ್ಮಕ ಕಾರ್ಯಕ್ರಮ) ನಿರ್ಧರಿಸಿ ಮಾಡಲಾಗಿರುತ್ತದೆ, ಅವರ ಸಂಹಿತೆ ಮೊದಲೇ ನಿರ್ಧಾರವಾಗಿರುತ್ತದೆ ಎಂದೂ ಅವರ ಹೇಳಿದ್ದಾರೆ.

ಪಲಾಶ ಸೇನ ಇವರು ಓರ್ವ ವಿದೇಶಿ ಗಾಯಕಿಯ ಉದಾಹರಣೆಯನ್ನು ನೀಡುತ್ತಾ, ಅವಳ ಗೀತೆಯ ಕಾರ್ಯಕ್ರಮಗಳಿಗೆ ಬಹಳ ಜನಸಂದಣಿಯಿರುತ್ತಿತ್ತು; ಆದರೆ ಅವಳು ನೇರವಾಗಿ ಹಾಡದೇ ಕೇವಲ ತುಟಿಗಳ ಚಲನವಲನ ಮಾಡುತ್ತಿದ್ದಳು, ಇದು ವೀಕ್ಷಕರ ಗಮನಕ್ಕೆ ಬರುತ್ತಲೇ ಅವರು ಅವಳಿಗೆ ಮೊಟ್ಟೆ ಎಸೆದಿದ್ದರು. ಭಾರತದಲ್ಲಿ ಶೇ. 99 ರಷ್ಟು ಗಾಯಕರು ಇದೇ ರೀತಿ ಮಾಡುತ್ತಾರೆ. ನಾನು ಅವರ ಹೆಸರುಗಳನ್ನು ಹೇಳುವುದಿಲ್ಲ. ಆದರೆ ಇದು ದುರ್ದೈವವಾಗಿದೆ. ಇದು ಜಗತ್ತಿನಾದ್ಯಂತ ನಡೆಯುತ್ತಿದೆ. ವೀಕ್ಷಕರ ದಿಕ್ಕು ತಪ್ಪಿಸುವ ಈ ಗಾಯಕರು ತಮ್ಮೊಂದಿಗೇ ಪ್ರಾಮಾಣಿಕರಾಗಿಲ್ಲ. ಇದಕ್ಕಿಂತ ಹೆಚ್ಚು ಏನು ಹೇಳಬಲ್ಲೆನು ? ಎಂದು ಹೇಳಿದರು.

`ರಿಯಾಲಿಟಿ ಶೋ’ ಸುಳ್ಳಾಗಿರುತ್ತದೆ !

ಪಲಾಶ ಸೇನರು ಮಾತನ್ನು ಮುಂದುವರೆಸುತ್ತಾ, ನಾನು `ರಿಯಾಲಿಟಿ ಶೋ’ ಮಾಡಿದ್ದೇನೆ; ಆದರೆ ಇದರ ಬಗ್ಗೆ ಈಗ ನನಗೆ ಪಶ್ಚಾತ್ತಾಪವಾಗುತ್ತಿದೆ. ಅಲ್ಲಿ ಸಂಹಿತೆಯನುಸಾರ ಅಂದರೆ ನಿರ್ಧರಿಸಿದಂತೆ ನಡೆಯುತ್ತದೆ. ಈ ಎಲ್ಲ `ರಿಯಾಲಿಟಿ ಶೋ’ ಸುಳ್ಳಾಗಿರುತ್ತದೆ. ರಿಯಾಲಿಟಿಯ ಹೆಸರಿನಲ್ಲಿ ಅಲ್ಲಿ ಏನೂ ರಿಯಾಲಿಟಿ (ಸತ್ಯತೆ) ಇರುವುದಿಲ್ಲ. ಈ ಶೋನಲ್ಲಿ ಯಾವುದೇ ತೆರದ ಭಾವನೆಗಳಿರುವುದಿಲ್ಲ. ಅದು ಕೇವಲ ಒಂದು ಟಿ.ವಿ. ಶೋ ಆಗಿದ್ದು, ಅದು `ಸಾಸ ಭಿ ಕಭೀ ಬಹೂ ಥಿ’ ಯಂತಹ ಮಾಲಿಕೆಯಂತೆ ನೋಡಬೇಕು. ಒಂದು `ರಿಯಾಲಿಟಿ ಶೋ’ ನಲ್ಲಿ ವೀಕ್ಷಕನೆಂದು ಕೆಲಸವನ್ನು ನೋಡುತ್ತಿರುವಾಗ ದಲೇರ ಮೆಹಂದಿಯವರೊಂದಿಗೆ ನನ್ನ ವಾದವಾಯಿತು. ಅವರು ಸಂಹಿತೆಯಂತೆ ಮಾತನಾಡುತ್ತಿದ್ದರು. ಆದರೆ ನಾನು ಸತ್ಯದಂತೆ ನಡೆದುಕೊಳ್ಳಲು ಪ್ರಯತ್ನಿಸುತ್ತಿದ್ದೆನು ಎಂದು ಹೇಳಿದರು.