ಭಾರತದ ನಿಯಮಗಳನ್ನು ಪಾಲಿಸಿ ಇಲ್ಲವಾದರೆ ಜೈಲಿಗೆ ಹೋಗಬೇಕಾಗಬಹುದು ! – ಟ್ವಿಟರ್ ನ ಎಲಾನ್ ಮಸ್ಕ್ ಇವರ ಸ್ಪಷ್ಟ ಮಾತು

ನವದೆಹಲಿ – ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಕಠಿಣ ನಿರ್ಬಂಧಗಳಿವೆ. ಆದ್ದರಿಂದ ನಮ್ಮ ಜಾಲತಾಣ ಅಮೇರಿಕಾ ಅಥವಾ ಇತರೆ ಪಾಶ್ಚಿಮಾತ್ಯ ದೇಶಗಳಲ್ಲಿನ ಟ್ವಿಟರ ಉಪಯೋಗಿಸುವವರಿಗೆ ಎಷ್ಟು ಸ್ವಾತಂತ್ರ್ಯ ನೀಡುತ್ತದೆಯೋ, ಅಷ್ಟು ಸಮಾನ ಸ್ವಾತಂತ್ರ್ಯವನ್ನು ಭಾರತದಲ್ಲಿ ಟ್ವಿಟರ ಉಪಯೋಗಿಸುವವರಿಗೆ ಭಾರತ ನೀಡಲು ಸಾಧ್ಯವಿಲ್ಲ. ಟ್ವಿಟರ ಕಂಪನಿ ಕೆಲವೊಮ್ಮೆ ಭಾರತದಲ್ಲಿ ಕೆಲವೊಂದು ಮಾಹಿತಿಗಳನ್ನು ಕಡಿತಗೊಳಿಸುತ್ತದೆ. (ಸೆನ್ಸಾರ್ ಮಾಡುತ್ತದೆ) ಹಾಗೆಯೇ ಕೆಲವು ಮಾಹಿತಿಗಳನ್ನು ನಿರ್ಬಂಧಿಸುತ್ತದೆ (ಬ್ಲಾಕ್ ಮಾಡುತ್ತದೆ.) ಇದರಿಂದ ನಾವು ಒಂದು ದೇಶದ ನಿಯಮಗಳ ವಿರುದ್ಧ ಹೋಗಲು ಸಾಧ್ಯವಿಲ್ಲ. ಒಂದೋ ನಮ್ಮ ಜನರು ಜೈಲಿಗೆ ಹೋಗಬೇಕಾಗುತ್ತದೆ ಅಥವಾ ನಮಗೆ ನಿಯಮಗಳನ್ನು ಪಾಲಿಸಬೇಕಾಗುವುದು. ಹೀಗೆ ಎರಡೇ ಪರ್ಯಾಯಗಳಿದ್ದರೆ, ನಾವು ನಿಯಮಗಳ ಪಾಲನೆ ಮಾಡುವೆವು, ಎಂದು ಟ್ವಿಟರ ಮಾಲೀಕ ಎಲಾನ್ ಮಸ್ಕ್ ಇವರು ಹೇಳಿದ್ದಾರೆ. `ಬಿಬಿಸಿ’ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಎಲಾನ್ ಮಸ್ಕ್ ಕೆಲವು ದಿನಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಟ್ವಿಟರ ಕಂಪನಿಯನ್ನು ಖರೀದಿಸಿದ ಬಳಿಕ ಅವರು ನಿರ್ಬಂಧಿಸಲಾಗಿದ್ದ ಅನೇಕ ಟ್ವಿಟರ ಖಾತೆಗಳನ್ನು ಪುನಃ ಪ್ರಾರಂಭಿಸಿದ್ದಾರೆ; ಆದರೆ ಭಾರತದಲ್ಲಿರುವ ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧಗಳ ವಿಷಯದಲ್ಲಿ ಅವರು `ನಾವು ಈ ನಿಯಮಗಳ ಪಾಲನೆ ಮಾಡುವೆವು’, ಎಂದು ಹೇಳಿದ್ದಾರೆ.