ಕೆಲವು ನ್ಯಾಯಮೂರ್ತಿಗಳಲ್ಲಿ ಆಲಸ್ಯ ಇರುವುದರಿಂದ ಅವರು ತೀರ್ಪುಗಳು ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ ! – ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ ಇವರ ಹೇಳಿಕೆ !

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ

ಕೊಚ್ಚಿ (ಕೇರಳ) – ಕೆಲವು ನ್ಯಾಯಮೂರ್ತಿಗಳಲ್ಲಿ ಆಲಸ್ಯವಿದೆ. ಅವರು ಸಮಯಕ್ಕೆ ಸರಿಯಾಗಿ ತೀರ್ಪು ನೀಡುವುದಿಲ್ಲ. ಅವರಿಗೆ ತೀರ್ಪು ಬರೆಯಲು ಅನೇಕ ವರ್ಷಗಳು ಬೇಕಾಗುತ್ತದೆ. ಕೆಲವರಿಗೆ ಕೆಲಸವೂ ಕೂಡ ಬರುವುದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ ಇವರು ‘ಕಾಲೇಜಿಯಮ್ ಸಂವಿಧಾನಕ್ಕಿಂತಲೂ ಬೇರೆ ಆಗಿದೆಯೇ ?’ ಈ ವಿಷಯದ ಬಗ್ಗೆ ಆಯೋಜಿಸಿದ್ದ ಸಂವಾದದಲ್ಲಿ ಈ ಹೇಳಿಕೆ ನೀಡಿದರು. ‘ಕಾಲೇಜಿಯಮ್’ (ನ್ಯಾಯಾಧೀಶರ ನೇಮಕ ಮಾಡುವ ನ್ಯಾಯಾಲಯದ ಪ್ರಣಾಳಿಕೆ) ಅತ್ಯಂತ ಅಪಾರದರ್ಶಕವಾಗಿ ಕೆಲಸ ಮಾಡುತ್ತದೆ. ನ್ಯಾಯಾಧೀಶರ ವಿರೋಧದಲ್ಲಿ ಯಾವುದಾದರೋಮದು ಆರೋಪ ಬೆಳಕಿಗೆ ಬಂದರೆ ಸಾಮಾನ್ಯವಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’, ಎಂದು ಈ ಸಮಯದಲ್ಲಿ ಅವರು ಆರೋಪಿಸಿದರು.

ನಿವೃತ್ತ ನ್ಯಾಯಮೂರ್ತಿ ಚೆಲಮೇಶ್ವರ ಇವರು ಮಾತು ಮುಂದುವರಿಸುತ್ತಾ, ‘ಕಾಲೇಜಿಯಮ್’ ಎದುರು ಎಲ್ಲಾ ಪ್ರಕರಣಗಳು ಬರುತ್ತವೆ; ಆದರೆ ಏನು ಆಗುವುದಿಲ್ಲ. ಆರೋಪ ಗಂಭೀರವಾಗಿದ್ದರೆ, ಮಾತ್ರ ಕ್ರಮ ಕೈಗೊಳ್ಳಲೇಬೇಕು. ಯಾವ ನ್ಯಾಯಾಧೀಶರ ಮೇಲೆ ಆರೋಪವಿದೆಯೋ ಅವರನ್ನು ವರ್ಗಾವಣೆ ಮಾಡುವುದು ಇದು ಸಾಮಾನ್ಯ ಪದ್ಧತಿಯಾಗಿದೆ. ನಾನು ಏನಾದರೂ ಹೇಳಿದರೆ, ‘ನ್ಯಾಯಪಾಲಿಕೆಗೆ ತೊಂದರೆ ನೀಡುತ್ತಾರೆ’, ಎಂದು ಹೇಳುತ್ತಾ ನನಗೆ ನಿವೃತ್ತಿಯ ನಂತರ ವಿರೋಧ ವ್ಯಕ್ತಪಡಿಸಲಾಗುವುದು, ಇದು ನನ್ನ ಹಣೆಬರಹವಾಗಿದೆ. ಸಾಮಾನ್ಯ ಮನುಷ್ಯನಿಗೆ ಲಾಭವಾಗುವ ದೃಷ್ಟಿಯಿಂದ ಕಾಲೇಜಿಯಮ್ ಪದ್ಧತಿ ಹೇಗೆ ಸುದೃಢವಾಗುವುದು ಇದರ ಬಗ್ಗೆ ಯಾರಿಗೂ ಗಮನವಿಲ್ಲ ಎಂದು ಹೇಳಿದರು.

ಸಂಪಾದಕರ ನಿಲುವು

ಇದು ಬಹಳ ಗಂಭೀರವಾಗಿದ್ದು ನ್ಯಾಯವ್ಯವಸ್ಥೆ ಹೆಚ್ಚು ಗತಿಶೀಲ ಮಾಡುವುದಕ್ಕಾಗಿ ನ್ಯಾಯಪಾಲಿಕೆ ಮತ್ತು ಸರಕಾರ ಪ್ರಯತ್ನ ಮಾಡುವುದೇ ?