ಆರೋಪಿಯ ಮೇಲಿನ ಮೊಕದ್ದಮೆಯನ್ನು ರದ್ದುಗೊಳಿಸಲು ಉಚ್ಚನ್ಯಾಯಾಲಯದಿಂದ ನಿರಾಕರಣೆ !

ಭಗವಾನ ಶಿವನನ್ನು ಅತ್ಯಂತ ಕೀಳಾಗಿ ವಿಡಂಬನೆ ಮಾಡಿರುವ ಪ್ರಕರಣ

ಅಲಹಾಬಾದ – ಫೇಸಬುಕ್ ನಲ್ಲಿ ಭಗವಾನ ಶಿವನ ವಿಷಯದಲ್ಲಿ ಆಕ್ಷೇಪಾರ್ಹ ಪೋಸ್ಟ ಪ್ರಸಾರ ಮಾಡಿರುವ ಪ್ರಕರಣದಲ್ಲಿ ಆರೋಪಿಯ ಮೇಲಿನ ಮೊಕದ್ದಮೆಯನ್ನು ರದ್ದುಗೊಳಿಸಲು ಅಲಹಾಬಾದ ಉಚ್ಚ ನ್ಯಾಯಾಲಯವು ನಿರಾಕರಿಸಿದೆ. ಈ ವಿಷಯದಲ್ಲಿ ಆರೋಪಿಯು ದಾಖಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಅಲೀಗಡ್ ನ ಆಸಿಫನು ಈ ಪೋಸ್ಟ ಪ್ರಸಾರ ಮಾಡಿದ್ದನು. ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಜೆ.ಜೆ. ಮುನಿರ ಇವರು ಮಾತನಾಡುತ್ತಾ, ಸಾರ್ವಜನಿಕರು ಅಥವಾ ಸಮುದಾಯದಲ್ಲಿ ದ್ವೇಷವನ್ನು ಹರಡುವ ಪ್ರವೃತ್ತಿ ಹೊಂದಿರುವವರ ವಿರುದ್ಧದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಂತಹ ಪ್ರಕರಣಗಳನ್ನು ಮೃದುವಾಗಿ ಪರಿಗಣಿಸಿ ದ್ವೇಷಪೂರ್ಣ ಮಾನಸಿಕತೆ ವೃದ್ಧಿಸಲು ನಾವು ಪೋಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಆರೋಪಿಯ ಮೇಲಿನ ಮೊಕದ್ದಮೆಯನ್ನು ರದ್ದುಗೊಳಿಸಬೇಕೆಂದು, ವಾದಿಪರ ವಕೀಲರು ತಮ್ಮ ಯುಕ್ತಿವಾದವನ್ನು ಮಂಡಿಸುವಾಗ, ಆರೋಪಿಯು ಈ ಆಕ್ಷೇಪಾರ್ಹ ಪೋಸ್ಟನ್ನು ಸಿದ್ಧಪಡಿಸಿರಲಿಲ್ಲ. ಅವನು ಕೇವಲ ಫಾರ್ವರ್ಡ (ಮುಂದಕ್ಕೆ ಕಳುಹಿಸುವುದು) ಮಾಡಿದ್ದನು. ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯವು, ಯಾವುದೇ ಒಂದು ಪೋಸ್ಟನಿಂದ 2 ಗುಂಪುಗಳಲ್ಲಿ ವೈಮನಸ್ಸು ನಿರ್ಮಾಣವಾಗುವಂತಹದ್ದಿದ್ದರೆ, ಇಂತಹ ಪೋಸ್ಟ ಫೇಸಬುಕ್ ಮೇಲೆ ಇಡುವುದು ಅಪರಾಧವಾಗಿದೆ. ಈ ಪೋಸ್ಟನ ಭಾಷೆಯನ್ನು ನೋಡಿದರೆ ಇದರಿಂದ ಒಂದು ಧರ್ಮದವರ ಧಾರ್ಮಿಕ ಭಾವನೆಯನ್ನು ಉದ್ದೇಶಪೂರ್ವಕವಾಗಿ ನಿಂದಿಸುವ ಉದ್ದೇಶ ಕಂಡು ಬರುತ್ತದೆ ಎಂದು ಹೇಳಿದೆ.