ಧಾರ್ಮಿಕ ಸ್ಥಳಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿಧರಿಗೆ ಸಂಭಾವನೆ ಕೊಡುವುದೂ ಕೂಡ ಜಾತ್ಯತೀತತೆ ! – ಅಲಹಾಬಾದ ಉಚ್ಚ ನ್ಯಾಯಾಲಯ

ಅಲಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠದ ಸ್ಪಷ್ಟೋಕ್ತಿ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಅಲಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಉತ್ತರಪ್ರದೇಶ ಸರಕಾರದಿಂದ ಶ್ರೀರಾಮನವಮಿಯ ನಿಮಿತ್ತ ರಾಜ್ಯದ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಗಳಲ್ಲಿ ಭಾಗವಹಿಸಿದ ಕಲಾವಿಧರಿಗೆ ಸಂಭಾವನೆ ನೀಡುವುದರ ವಿರುದ್ಧ ದಾಖಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿತು. ನ್ಯಾಯಾಲಯ, ಸರಕಾರದ ನಿರ್ಣಯ ಯಾವುದೇ ಧರ್ಮ ಅಥವಾ ಸಂಪ್ರದಾಯದ ಪ್ರಸಾರಕ್ಕಾಗಿ ಹಣವನ್ನು ವೆಚ್ಚ ಮಾಡುವ ವರ್ಗದಲ್ಲಿ ಬರುವುದಿಲ್ಲ. ಇದು ಸರಕಾರದ ಒಂದು ಸಾಮಾನ್ಯ ಜಾತ್ಯತೀತತೆಯ ಕೃತಿಯಾಗಿದೆ ಎಂದು ಹೇಳಿದೆ.

ರಾಜ್ಯ ಸರಕಾರವು ಮಾರ್ಚ 10 ರಂದು ಕೈಕೊಂಡ ನಿರ್ಣಯದಲ್ಲಿ, `ಶ್ರೀರಾಮನವಮಿಯ ಸಮಯದಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರತಿ ಜಿಲ್ಲೆಗೆ 1 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲು ತೀರ್ಮಾನಿಸಿತ್ತು. ಇದನ್ನು ವಿರೋಧಿಸಿ ಮೋತಿಲಾಲ ಯಾದವ ಇವರು ಅರ್ಜಿಯನ್ನು ದಾಖಲಿಸಿದ್ದರು. (ಮುಸಲ್ಮಾನರು ಅಥವಾ ಕ್ರೈಸ್ತರಿಂದಲ್ಲ, ಹಿಂದೂಗಳಿಂದಲೇ ವಿರೋಧ ವ್ಯಕ್ತವಾಗುತ್ತಿದೆ ಎನ್ನುವುದನ್ನು ಗಮನಿಸಬೇಕಾಗಿದೆ ! – ಸಂಪಾದಕರು)

ಸಂವಿಧಾನದ ಉಲ್ಲಂಘನೆಯಾಗಿಲ್ಲ ! – ಉಚ್ಚ ನ್ಯಾಯಾಲಯ

ಈ ವಿಷಯದಲ್ಲಿ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಓ.ಪಿ. ಶುಕ್ಲಾ ಇವರ ಖಂಡಪೀಠವು, ಒಂದು ವೇಳೆ ಸರಕಾರ ನಾಗರಿಕರಿಂದ ಸಂಗ್ರಹಿಸಲಾಗಿದ್ದ ತೆರಿಗೆ ಹಣದಿಂದ ಸ್ವಲ್ಪ ಹಣವನ್ನು ವೆಚ್ಚ ಮಾಡಿದ್ದರೆ ಮತ್ತು ಸ್ವಲ್ಪ ಹಣವನ್ನು ಯಾವುದಾದರೂ ಧಾರ್ಮಿಕ ಸಂಪ್ರದಾಯಕ್ಕೆ ಸೌಲಭ್ಯಗಳನ್ನು ಒದಗಿಸಲು ನೀಡುತ್ತಿದ್ದರೆ, ಅದು ಸಂವಿಧಾನದ ಕಲಂ 27 ರ ಉಲ್ಲಂಘನೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಜಾತ್ಯತೀತ ಕೃತಿ ಮತ್ತು ಧಾರ್ಮಿಕ ಕೃತಿಯಲ್ಲಿರುವ ಅಂತರದ ಒಂದು ಸ್ಪಷ್ಟ ಗುರುತು ಅಸ್ತಿತ್ವದಲ್ಲಿದೆ ಎಂಬುದು ಯಾವಾಗಲೂ ಗಮನದಲ್ಲಿಡಬೇಕು. ಅರ್ಜಿದಾರರನು ಸರಕಾರದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾನೆ. ಪ್ರತ್ಯಕ್ಷದಲ್ಲಿ ಸರಕಾರವು ಶ್ರೀರಾಮನವಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿಧರಿಗೆ ಸಂಭಾವನೆಯನ್ನು ನೀಡಲು ಯೋಜನೆಯನ್ನು ಕೈಕೊಂಡಿದೆ. ಈ ಯೋಜನೆ ದೇವಸ್ಥಾನಗಳ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆ ಇರಲಿಲ್ಲ ಎಂದು ತಿಳಿಸಿದೆ.