ಮುಂಬಯಿ – ಹಿಂದೂಗಳ ವಿರೋಧದ ಬಳಿಕ ಗಾಯಕ ಲಕಿ ಅಲಿಯವರು `ಫೇಸಬುಕ’ ಮೇಲೆ ಪ್ರಸಾರ ಮಾಡಿದ ` ಬ್ರಾಹ್ಮಣರು ಇಬ್ರಾಹಿಂ ವಂಶಜರಾಗಿದ್ದರು’, ಎಂದು ಹಾಕಿದ್ದ `ಪೋಸ್ಟ’ ನ್ನು ತೆಗೆದು ಹಾಕಿದರು. ಈ ವಿಷಯದಲ್ಲಿ ಕ್ಷಮಾಯಾಚನೆ ಮಾಡುವಾಗ ಅವರು `ಇನ್ನು ಮುಂದೆ ಯಾವುದಾದರೂ ಪೋಸ್ಟ ಹಾಕುವಾಗ ಗಂಭೀರತೆಯಿಂದ ವಿಚಾರ ಮಾಡುತ್ತೇನೆ ಮತ್ತು ಎಚ್ಚರಿಕೆ ವಹಿಸುತ್ತೇನೆ’, ಎಂದು ಹೇಳಿದ್ದಾರೆ.
Bollywood singer Lucky Ali apologises for his ‘Brahman are a lineage of Ibrahim’ Facebook posthttps://t.co/1NrwPLmTek
— OpIndia.com (@OpIndia_com) April 12, 2023
ಈ ವಿವಾದಿತ ಪೋಸ್ಟನಲ್ಲಿ ಲಕಿ ಅಲಿಯವರು, ಬ್ರಾಹ್ಮಣ ಈ ಶಬ್ದದ ಉತ್ಪತ್ತಿ `ಬ್ರಹ್ಮ’ ಈ ಶಬ್ದದಿಂದ ಆಗಿದೆ. ಈ ಶಬ್ದ `ಅಬ್ರಾಹಮ್’ ಅಥವಾ `ಇಬ್ರಾಹಿಮ್’ ನಿಂದ ಬಂದಿದೆ. ಇದರಿಂದ ಬ್ರಾಹ್ಮಣರು ಇವನು ಇಬ್ರಾಹಿಮ್ ವಂಶಜ’ ನಾಗಿದ್ದಾರೆ ಎಂದು ಹೇಳಿದ್ದರು. ಈ ಕಾರಣದಿಂದ ನಮ್ಮ ನಮ್ಮಲ್ಲಿಯೇ ಜಗಳವಾಡಿ ಏನು ಸಿಗುವುದು ? (‘ಬ್ರಹ್ಮ ಜಾನತಿ ಇತಿ ಬ್ರಾಹ್ಮಣಃ ಎಂದು `ಬ್ರಾಹ್ಮಣ’ ಈ ಶಬ್ದದ ವ್ಯಾಖ್ಯಾನವಿದೆ. ಭಗವದ್ಗೀತೆಯಲ್ಲಿ ಭಗವಾನ ಶ್ರೀಕೃಷ್ಣನು ಹೇಳಿರುವ ನಾಲ್ಕು ವರ್ಣಗಳ ಪೈಕಿ `ಬ್ರಾಹ್ಮಣ’ ಇದು ಮೊದಲ ವರ್ಣವಾಗಿದೆ. ಅಲಿ ಲಕಿಯವರು ಯಾವ ಹೆಸರಿನಿಂದ `ಬ್ರಾಹ್ಮಣ’ ಶಬ್ದದ ಉತ್ಪತ್ತಿ ಆಗಿದೆಯೆಂದು ಅಪಭ್ರಂಶಗೊಳಿಸಿದ್ದಾರೆಯೋ. ಆ ಸಮಯದಲ್ಲಿ ಆ ಪಂಥದವರ ಉತ್ಪತ್ತಿಯೂ ಆಗಿರಲಿಲ್ಲ – ಸಂಪಾದಕರು)
ಪೋಸ್ಟ ಹಿಂಪಡೆಯುವಾಗ ಅಲಿಯವರು `ನನ್ನ ಪೋಸ್ಟ ಕಾರಣದಿಂದ ವಿವಾದ ನಿರ್ಮಾಣವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಯಾರ ಭಾವನೆಯನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಹಾಗೇನಾದರೂ ಆಗಿದ್ದಲ್ಲಿ ನಾನು ಖೇದ ವ್ಯಕ್ತ ಪಡಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಬರಬೇಕು, ಇದೇ ನನ್ನ ಇದರ ಹಿಂದಿನ ಉದ್ದೇಶವಾಗಿತ್ತು. ನನ್ನ ಅನೇಕ ಹಿಂದೂ ಸಹೋದರ-ಸಹೋದರಿಯರು ಇದರಿಂದ ನೊಂದಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಮನಃ ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ’, ಎಂದು ಕ್ಷಮೆಯನ್ನು ಕೋರಿ ಮತ್ತೊಂದು ಪೋಸ್ಟ `ಫೇಸಬುಕ್’ ನಲ್ಲಿ ಪ್ರಸಾರ ಮಾಡಿದ್ದಾರೆ. ಲಕಿ ಅಲಿಯವರು ಹಿಂದಿ ಚಲನಚಿತ್ರ ಸೃಷ್ಟಿಯ ಪ್ರಸಿದ್ಧ ಗಾಯಕರಾಗಿದ್ದಾರೆ. ಸಧ್ಯಕ್ಕೆ ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಸಂಪಾದಕೀಯ ನಿಲುವು
|