‘ಜೈ ಶ್ರೀರಾಮ’ ಎಂದು ಹೇಳಿದ್ದರಿಂದ ಮಿಷನರಿ ಶಾಲೆಯಲ್ಲಿ ೧೦ ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಅಮಾನತು !

ಜಾರ್ಖಂಡ್ ನ ಘಟನೆ

ಧನಬಾದ (ಜಾರ್ಖಂಡ್) – ಬೊಕಾರ ಜಿಲ್ಲೆಯಲ್ಲಿನ ಗೊಮಿಯಾದಲ್ಲಿ ಲಾಯೋಲಾ ಮಿಷನರಿ ಶಾಲೆಯ ಮುಖ್ಯೋಪಾಧ್ಯಾಯರು ೧೦ ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ‘ಜೈ ಶ್ರೀರಾಮ’ನ ಘೋಷಣೆ ಮಾಡಿದ ಪ್ರಕರಣದಲ್ಲಿ ೨ ದಿನಗಳಿಗಿ ಅಮಾನತುಗೊಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತ ಈ ಪ್ರಕರಣದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಬಳಿ ಒತ್ತಯಿಸಿದೆ. ಮಿಷನರಿ ಶಾಲೆಯ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳ ಅಶಿಸ್ತತನ ಮತ್ತು ಶಿಕ್ಷಕರ ಆದೇಶದ ಉಲ್ಲಂಘನೆ ಮಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

೧. ವಿಶ್ವ ಹಿಂದೂ ಪರಿಷತ್ತಿನ ಧನಬಾದ ವಿಭಾಗ ಪ್ರಮುಖ ವಿನಯ ಕುಮಾರ ಇವರು ಶಾಲಾ ಆಡಳಿತದ ವಿರೋಧದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದ್ದಾರೆ.

೨. ಈ ಹಿಂದೆ ಜಾರ್ಖಂಡದಲ್ಲಿ ಗಿರಿಡಿಹ ಜಿಲ್ಲೆಯಲ್ಲಿನ ಒಂದು ಸರಕಾರಿ ಶಾಲೆಯಲ್ಲಿ ಕೂಡ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿತ್ತು. ಆ ಘಟನೆಯಲ್ಲಿ ತರಗತಿಯಲ್ಲಿನ ಫಲಕದ ಮೇಲೆ ‘ಜೈ ಶ್ರೀರಾಮ’ ಬರೆದಿದ್ದರಿಂದ ವಿದ್ಯಾರ್ಥಿಗಳಿಗೆ ಅಮಾನವಿಯವಾಗಿ ಥಳಿಸಲಾಗಿತ್ತು. (ಮಷನರಿ ಶಾಲೆಗಳಲ್ಲಿ ‘ಓ ಗಾಡ್’ ಈ ರೀತಿಯ ಪ್ರಾರ್ಥನೆ ಹಿಂದೂ ವಿದ್ಯಾರ್ಥಿಗಳಿಗೆ ಹೇಳಲು ಅನಿವಾರ್ಯಗೊಳಿಸುತ್ತಾರೆ; ಆದರೆ ‘ಜೈ ಶ್ರೀರಾಮ’ ಎಂದು ಹೇಳಿದರೆ ಹುಡುಗರಿಗೆ ಶಿಕ್ಷೆ ನೀಡಲಾಗುತ್ತದೆ ! ಹೀಗೆ ಮಾಡಲು ಜಾರ್ಖಂಡ್ ಭಾರತದಲ್ಲಿದೆಯೊ ಅಥವಾ ಯುರೋಪಿನಲ್ಲಿದೆಯೋ ? – ಸಂಪಾದಕರು)

ಸಂಪಾದಕೀಯ ನಿಲುವು

  • ಮಿಷನರಿ ಶಾಲೆಯಲ್ಲಿನ ಹಿಂದೂ ದ್ವೇಷ ಹೊಸದೇನಲ್ಲ. ಈಗ ಹಿಂದೂ ಪೋಷಕರು ‘ಸ್ವತಃ ತಮ್ಮ ಮಕ್ಕಳನ್ನು ಇಂತಹ ಶಾಲೆಗಳಲ್ಲಿ ಕಳುಹಿಸಬೇಕೇ ?’, ಇದರ ವಿಚಾರ ಮಾಡುವುದು ಅವಶ್ಯಕ !
  • ಜಾರ್ಖಂಡ್ ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಹಿಂದೂ ದ್ವೇಷಿ ಸರಕಾರ ಇರುವುದರಿಂದ ಇಂತಹ ಕ್ರೈಸ್ತ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುವುದು ಅಸಾಧ್ಯ ! ಹಿಂದೂಗಳೇ ನ್ಯಾಯಕ್ಕಾಗಿ ಪ್ರಭಾವಿ ಸಂಘಟನೆ ಸ್ಥಾಪಿಸುವುದು ಅವಶ್ಯಕ !