ಪಾಜೀಗಿ (ಮ್ಯಾನಮಾರ) – ಮ್ಯಾನಮಾರ ಸೇನೆಯು ಪಾಜೀಗಿ ನಗರದಲ್ಲಿನ ಸಾಂಗೇಗಿ ಪ್ರದೇಶದಲ್ಲಿ ಹೆಲಿಕಾಪ್ಟರ್ ನಿಂದ ಬಾಂಬ್ ಎಸೆತ ಮತ್ತು ಗುಂಡಿನ ದಾಳಿ ನಡೆಸಿರುವುದರಿಂದ ೧೦೦ ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಏಪ್ರಿಲ್ ೧೧ ರಂದು ಈ ಘಟನೆ ನಡೆದಿದೆ. ಸುಮಾರು ೨೦ ನಿಮಿಷಗಳ ಕಾಲ ದಾಳಿ ನಡೆದಿದೆ. ಸಾವನ್ನಪ್ಪಿರುವವರಲ್ಲಿ ಚಿಕ್ಕ ಮಕ್ಕಳು ಮತ್ತು ಮಹಿಳೆಯರು ಕೂಡ ಇದ್ದಾರೆ. ಇಲ್ಲಿ ‘ಪೀಪಲ್ಸ್ ಡಿಫೆನ್ಸ್ ಫೋರ್ಸೆಸ್’ (ಪಿಡಿಎಫ್) ಈ ಸಂಘಟನೆಯ ಕಾರ್ಯಾಲಯ ತೆರೆಯುವಾಗ ಈ ದಾಳಿ ನಡೆದಿದೆ. ಈ ಸಂಘಟನೆ ದೇಶಾದ್ಯಂತ ಸೈನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತದೆ. ದಾಳಿಯ ಸಮಯದಲ್ಲಿ ೩೦೦ ಕ್ಕೂ ಹೆಚ್ಚಿನ ಜನರು ಉಪಸ್ಥಿತರಿದ್ದರು.
Airstrikes on Myanmar village feared to have killed 100 #MyanmarJunta #airstrike #MyanmarMilitaryTerroristshttps://t.co/V8o6PajKTH
— India.com (@indiacom) April 12, 2023
ಇದು ಆಘಾತಕಾರಿ ಚಿತ್ರಣ ! – ವಿಶ್ವ ಸಂಸ್ಥೆ
ವಿಶ್ವ ಸಂಸ್ಥೆಯು ಸೈನ್ಯದ ದಾಳಿಯನ್ನು ಖಂಡಿಸಿದೆ. ವಿಶ್ವ ಸಂಸ್ತೆಯ ಮಾನವ ಹಕ್ಕುಗಳ ಉಚ್ಚಾಯುಕ್ತ ವೋಲ್ಕರ್ ತುರ್ಕ್ ಇವರು, ವಾಯು ದಾಳಿಯ ವಾರ್ತೆ ಆತಂಕಗೊಳಿಸಿದೆ. ಹೆಲಿಕಾಪ್ಟರ್ ನಿಂದ ಬಾಂಬ್ ಎಸೆದಾಗ, ಆಗ ಅನೇಕ ಶಾಲೆಯ ಮಕ್ಕಳು ಒಂದು ಹಾಲಿನಲ್ಲಿ ನೃತ್ಯ ಮಾಡುತ್ತಿದ್ದರು. ಎಂದು ಹೇಳಿದರು.