ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್‌ಗಾಗಿ ದೇವಸ್ಥಾನ ಹಾಗೂ ಮಸೀದಿಯಲ್ಲಿ ವಿಶೇಷ ಪೂಜೆ

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಇವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಾಗಿ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರ ದೇವಸ್ಥಾನ ಮತ್ತು ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆ

ಬೆಂಗಳೂರು – ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಅಬ್ಯರ್ಥಿಗಳ ಪಟ್ಟಿ ಘೋಷಿಸಲಾಗಿದೆ. ಮೂರನೇ ಹಂತದ ಬಿಡುಗಡೆಯಾಗುವ ಪಟ್ಟಿಯಲ್ಲಿ ಪುಲಕೇಶಿನಗರ ವಿಧಾನಸಭಾ ಮತದಾರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಇವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಾಗಿ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ದೇವಸ್ಥಾನ ಮತ್ತು ಮಂದಿರಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. (ಸತತವಾಗಿ ಹಿಂದೂ ಧರ್ಮದ ಮೇಲೆ ಆಘಾತ ಮಾಡುವ ಕಾಂಗ್ರೆಸ್ಸಿನವರ ಮೇಲೆ ದೇವರ ಕೃಪೆ ಹೇಗೆ ಆಗುವುದು ? – ಸಂಪಾದಕರು)

ಶ್ರೀನಿವಾಸಮೂರ್ತಿ ಇವರಿಗೆ ಟಿಕೆಟ್ ನೀಡಲು ತಡವಾಗುತ್ತಿರುವುದರಿಂದ ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ.

ಈ ಸಮಯದಲ್ಲಿ ಕಾಂಗ್ರೆಸ್ಸಿನ ಬೆಂಬಲಿಗರು, ”ಕಾಂಗ್ರೆಸ್ ಹಿರಿಯರ ಬಳಿ ಹೋಗಿ ಮೂರ್ತಿಯವರೆಗೆ ಟಿಕೆಟ್ ನೀಡುವುದಕ್ಕಾಗಿ ವಿನಂತಿಸಲು ಸಾಧ್ಯವಿಲ್ಲದೆ ಇರುವುದರಿಂದ ನಾವು ದೇವರಿಗೆ ಶರಣಾಗಿದ್ದೇವೆ. ನಾವು ಮಾಡುತ್ತಿರುವ ಪ್ರಾರ್ಥನೆಯಿಂದ ಅಖಂಡ ಶ್ರೀನಿವಾಸ ಮೂರ್ತಿ ಇವರಿಗೆ ಪಕ್ಷದ ಹಿರಿಯರು ಟಿಕೆಟ್ ನೀಡಲಿ. ಕಾಂಗ್ರೆಸ್ ಮೂರ್ತಿ ಇವರಿಗೆ ಟಿಕೆಟ್ ನೀಡಿದರೆ ಕಳೆದ ಬಾರಿಗಿಂತಲು ಹೆಚ್ಚಿನ ಮತಗಳಿಂದ ಆರಿಸಿ ಕಳಿಸುವೆವು” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನಲ್ಲಿ ವ್ಯಕ್ತಿನಿಷ್ಠತೆ ಹೆಡೆ ಎತ್ತುತ್ತಿರುವುದರ ಉದಾಹರಣೆಯಾಗಿದೆ. ಸಂತ್ರಸ್ತ ಹಿಂದೂಗಳ ಹಿತಕ್ಕಾಗಿ ಅಥವಾ ಅವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಕಾಂಗ್ರೆಸ್ಸಿನವರು ಎಂದಾದರು ಪ್ರಾರ್ಥನೆ ಮಾಡಿದ್ದಾರೆ ?