ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಮತಾಂಧ ಎಂದು ಸಾಬೀತು ಪಡಿಸುವ ಷಡ್ಯಂತ್ರ !
ಮುಂಬಯಿ – ರಾಷ್ಟ್ರೀಯ ಸ್ವಯಂಸೇವಕ ಸಂಘದ ನಕಲಿ ‘ಲೆಟರ್ ಹೆಡ್’ ಸಿದ್ಧಪಡಿಸಿ ಪ.ಪೂ. ಸರಸಂಘಚಾಲಕ ಡಾ. ಮೋಹನ ಜಿ ಭಾಗವತ ಇವರ ಹೆಸರಿನಿಂದ ಮುಸಲ್ಮಾನ ಹುಡುಗಿಯರನ್ನು ಹಿಂದೂ ಧರ್ಮಕ್ಕೆ ಕರೆತರಲು ಕರೆ ನೀಡಿರುವ ನಕಲಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಗಿದೆ. ‘ಲವ್ ಜಿಹಾದ್’ ನಲ್ಲಿ ಯಾವ ರೀತಿ ಹಿಂದೂ ಯುವತಿಯರನ್ನು ಮತಾಂಧ ಮುಸಲ್ಮಾನರು ಮೋಸ ಮಾಡುತ್ತಾರೆ, ಅದೇ ರೀತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಗಾದರೂ ಮಾಡಿ ಮುಸಲ್ಮಾನ ಯುವತಿಯರನ್ನು ಹಿಂದೂ ಧರ್ಮಕ್ಕೆ ಕರೆತರಲು ಕರೆ ನೀಡಿದೆ ಎಂದು ಈ ಪತ್ರದ ಮೂಲಕ ಅಪಪ್ರಚಾರ ಮಾಡಲಾಗಿದೆ.
ಈ ಪತ್ರದಲ್ಲಿ ಮುಸಲ್ಮಾನ ಹುಡುಗಿಯರನ್ನು ಆಕರ್ಷಿಸಲು ವಿವಿಧ ಆಮೀಷಗಳು ನೀಡಲಾಗಿದೆ. ಮುಸಲ್ಮಾನ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸುವುದು, ವಿವಾಹಕ್ಕೂ ಮೊದಲು ಶಾರೀರಿಕ ಸಂಬಂಧ ಇಟ್ಟುಕೊಳ್ಳುವುದು ಮತ್ತು ಅವರೊಂದಿಗೆ ವಿವಾಹ ಮಾಡಿಕೊಳ್ಳುವುದು, ಈ ರೀತಿ ಪತ್ರದಲ್ಲಿ ಕರೆ ನೀಡಲಾಗಿದೆ. ಇದರಲ್ಲಿ ಅವಶ್ಯಕ ಇರುವ ಕಾನೂನ ವಿಷಯವಾಗಿ ಮತ್ತು ಭೌತಿಕ ಸಹಾಯ ನೀಡಲು ಹಾಗೂ ವಿವಾಹದ ನಂತರ ೫ ಲಕ್ಷ ರೂಪಾಯಿ ನೀಡಲಾಗುವುದು, ಎಂದು ನಮೂದಿಸಲಾಗಿದೆ. ಈ ಎಲ್ಲಾ ಪ್ರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಇವರ ಮೇಲೆ ಹೋರಿಸಲಾಗಿದೆ. ಈ ಪತ್ರದ ಪ್ರತಿ ಅಖಿಲ ಭಾರತೀಯ ಹಿಂದೂ ಸಮಾಜ, ಭಜರಂಗದಳ, ಹಿಂದೂ ಸೇನೆ, ಹಿಂದೂ ಯುವ ವಾಹಿನಿ ಮತ್ತು ಸಮಸ್ತ ಹಿಂದೂ ಸಮಾಜಕ್ಕೆ ಕಳುಹಿಸಲಾಗಿದೆ, ಎಂದು ಇದರಲ್ಲಿ ನಮೂದಿಸಲಾಗಿದೆ.
‘ಟ್ವಿಟರ್ ನಲ್ಲಿ ‘#bhagwalovetrap’ ಈ ‘ಹ್ಯಾಶ್ ಟ್ಯಾಗ್’ (ಒಂದೇ ವಿಷಯದ ಬಗ್ಗೆ ಚರ್ಚೆ ನಡೆಸುವುದು) ಮೂಲಕ ಈ ನಕಲಿ ಪತ್ರ ಪ್ರಸಾರ ಮಾಡಲಾಗಿದೆ.
ಇದು ನಮ್ಮನ್ನು ಅವಮಾನಿಸುವ ಪ್ರಯತ್ನ ! – ರಾಷ್ಟ್ರೀಯ ಸ್ವಯಂಸೇವಕ ಸಂಘರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರಿನಲ್ಲಿ ಇಂಟರ್ನೆಟ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾರ ಮಾಡಲಾಗಿರುವ ಈ ಪತ್ರ ಸುಳ್ಳಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅವಮಾನಿಸುವ ಪ್ರಯತ್ನ ಇದಾಗಿದೆ. ಇಂತಹ ಯಾವುದೇ ಪತ್ರವು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರಸಾರ ಮಾಡಲಾಗಿಲ್ಲ ಅಥವಾ ಯಾವುದೇ ಸಭೆಯಲ್ಲಿ ಈ ಅಂಶಗಳ ಬಗ್ಗೆ ಚರ್ಚೆ ನಡೆದಿಲ್ಲ. ‘ಲೆಟರ್ ಹೆಡ್’ ಸ್ಕ್ಯಾನ್ ಮಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರಿನಲ್ಲಿ ಈ ನಕಲಿ ಪತ್ರ ತಯಾರಿಸಿರುವ ಸಾಧ್ಯತೆ ಇದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹಪ್ರಚಾರ ಪ್ರಮುಖ ಶ್ರೀ. ನರೇಂದ್ರಕುಮಾರ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. |
Islamists share fake letter attributed to RSS, claim Hindu outfit wants to ‘entrap’ Muslim womenhttps://t.co/YMVA9C3r72
— OpIndia.com (@OpIndia_com) April 10, 2023
ಸಂಪಾದಕೀಯ ನಿಲುವುಹಿಂದೂತ್ವನಿಷ್ಠ ಸಂಘಟನೆಗಳ ಅವಮಾನಿಸುವ ಹಿಂದೆ ಯಾರ ಕೈವಾಡ ಇದೆ? ಇದನ್ನು ಪೊಲೀಸರು ಕಂಡು ಹಿಡಿದು ಜನರ ಮುಂದೆ ಬಹಿರಂಗ ಪಡಿಸಬೇಕು ! |