ಅಯ್ಯೋದ್ಯೆಯ ಶ್ರೀರಾಮಮಂದಿರದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕೆ ೭೭ ಕೋಟಿ ರೂಪಾಯಿ ಖರ್ಚು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶದ ಪೊಲೀಸ್ ಮಹಾಸಂಚಾಲಕರಾದ ರಾಮ ಕುಮಾರ ವಿಶ್ವಕರ್ಮ ಇವರು ಶ್ರೀರಾಮಜನ್ಮ ಭೂಮಿಯ ಮೇಲೆ ಕಟ್ಟುವ ಭವ್ಯ ಶ್ರೀರಾಮ ಮಂದಿರದ ಭದ್ರತೆಯ ಬಗ್ಗೆ ಮಾಹಿತಿ ನೀಡುವಾಗ, ದೇವಸ್ಥಾನದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕಾಗಿ ೭೭ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ದೇವಸ್ಥಾನ ಪೂರ್ಣವಾದ ನಂತರ ಭಕ್ತರ ಗದ್ದಲ, ಐದು ಪಟ್ಟು ಹೆಚ್ಚಾಗುವುದು. ಆದ್ದರಿಂದ ಸ್ವಯಂ ಚಾಲಿತ ‘ಶಾರ್ಟ್ ಗನ್’, ‘ಬುಲೆಟ್ ಪ್ರೂಫ್ ಜಾಕೆಟ್’, ‘ಕಾವಲು ಉಪಕರಣ’, ಸರಯೂ ನದಿಯಲ್ಲಿ ನೇಮಿಸಲಾಗುವ ಶಸ್ತ್ರ ಸಜ್ಜಿತ ನೌಕೆ ಮುಂತಾದ ಉಪಕರಣ ಖರೆದಿಗಾಗಿ ಖರ್ಚು ಮಾಡಲಾಗುವುದು. ಭದ್ರತೆಗಾಗಿ ಅಯೋಧ್ಯೆಯಲ್ಲಿ ಅನೇಕ ವಾಚ್ ಟವರ್ ಕಟ್ಟಲಾಗುವುದು.

ದೇವಸ್ಥಾನದ ಬಾಗಿಲಿನ ಪರಿಸರದಲ್ಲಿ ಕಾವಲಿಗಾಗಿ ಮುಖ ಪರಿಚಯ ‘ಫೇಸ್ ರೆಕಾಗ್ನಿಶನ್’ ತಂತ್ರಜ್ಞಾನದ ಉಪಯೋಗ ಮಾಡಲಾಗುವುದು. ಸಂಪೂರ್ಣ ದೇವಸ್ಥಾನದಲ್ಲಿ ೮೦೦ ಕ್ಯಾಮೆರ ಅಳವಡಿಸಲಾಗುವುದು. ಆಕಾಶದಿಂದ ಡ್ರೋನ್ ಮೂಲಕ ೨೪ ಗಂಟೆ ನಿಗಾ ವಹಿಸಲಾಗುವುದು. ದೇವಸ್ಥಾನದ ಭದ್ರತೆಗಾಗಿ ಕೃತಕ ಬುದ್ಧಿವಂತಿಕೆ (‘ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ’) ಯ ಉಪಯೋಗ ಮಾಡಲಾಗುವುದು