ಸೋನಿಪತ (ಹರಿಯಾಣಾ) ಇಲ್ಲಿ ಸಮೂಹದಿಂದ ಮಸೀದಿಯ ಮೇಲೆ ದಾಳಿ

  • ನಮಾಜ ಮಾಡುವವರ ಮೇಲೆ ಹಲ್ಲೆ

  • 10 ಜನರಿಗೆ ಗಾಯ

ಸೋನಿಪತ (ಹರಿಯಾಣಾ) – ಇಲ್ಲಿಯ ಸಾಂದಲ ಕಲಾಂ ಗ್ರಾಮದಲ್ಲಿ ಎಪ್ರಿಲ್ 9 ರಂದು ರಾತ್ರಿ ಗುಂಪೊಂದು ಮಸೀದಿಯ ಮೇಲೆ ದಾಳಿ ನಡೆಸಿ, ಅಲ್ಲಿ ನಮಾಜ ಮಾಡುವವರ ಮೇಲೆ ಹಲ್ಲೆ ಮಾಡಿದೆ. ಅದರಲ್ಲಿ 10 ಜನರು ಗಾಯಗೊಂಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯ ಪ್ರಕರಣದಲ್ಲಿ ಪೊಲೀಸರು ಕೆಲವು ಜನರನ್ನು ಬಂಧಿಸಿದ್ದಾರೆ. ಈ ದಾಳಿ ನಮಾಜನಿಂದಾಗಿ ನಡೆದಿದೆಯೆಂದು ಹೇಳಲಾಗುತ್ತಿದೆ. ಸಧ್ಯಕ್ಕೆ ಇಲ್ಲಿ ಬಿಗುವಿನ ವಾತಾವರಣಇದೆ, ಪೊಲೀಸ ಬಂದೋಬಸ್ತ ನಿಯೋಜಿಸಲಾಗಿದೆ. ಈ ಹಿಂದೆ ಮಾರ್ಚ 30 ರಂದು ಕೆಲವು ಯುವಕರು ಮಸೀದಿಗೆ ನುಗ್ಗಿ ಕೇಸರಿ ಧ್ವಜವನ್ನು ಹಾರಿಸಿದ್ದರು. ಈ ಪ್ರಕರಣದಲ್ಲಿ 5 ಜನರನ್ನು ಬಂಧಿಸಲಾಗಿತ್ತು.

ಪೊಲೀಸ ಆಯುಕ್ತರಾಗಿರುವ ಸತೀಶ ಬಾಲನ ಇವರು ಮಾತನಾಡುತ್ತಾ, ಗ್ರಾಮದ ಕೆಲವು ಜನರು ಮಸೀದಿಗೆ ನುಗ್ಗಿ ನಮಾಜ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಅವರಲ್ಲಿ ಯಾವುದೇ ವೈಮನಸ್ಸು ಇರಲಿಲ್ಲ. ಪೊಲೀಸರು 16 ಯುವಕರನ್ನು ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ಮುಂದುವರಿದಿದೆ. ಭವಿಷ್ಯದಲ್ಲಿ ಕಾರಣವಿಲ್ಲದೆ ಧಾರ್ಮಿಕ ಸ್ಥಳಕ್ಕೆ ನುಗ್ಗಿ ಈ ರೀತಿ ಗಲಭೆ ನಡೆಸಿದರೆ, ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.