‘ನಾನು ಬದುಕಿರುವವರೆಗೂ ಬಸ್ತಾರ್ ಜಿಲ್ಲೆಯಲ್ಲಿ ಸರಾಯಿ ನಿಷೇಧ ಇಲ್ಲ !’ (ಅಂತೆ) – ಛತ್ತೀಸ್‌ಗಢನ ಕಾಂಗ್ರೆಸ್ ಸರಕಾರದ ಅಬಕಾರಿ ಸಚಿವ ಕವಾಸಿ ಲಖಮಾ

ಸಚಿವ ಕವಾಸಿ ಲಖಮಾ

ರಾಯಪುರ (ಛತ್ತೀಸ್‌ಗಢ) – ಸರಾಯಿ ಕುಡಿದರೇ ಯಾರೂ ಸಾಯುವುದಿಲ್ಲ, ಆದರೆ ಹೆಚ್ಚು ಸರಾಯಿ ಕುಡಿದರೇ ಸಾಯುತ್ತಾರೆ. ನಾನು ಬದುಕಿರುವವರೆಗೂ ಬಸ್ತಾರ್‌ನಲ್ಲಿ ಸರಾಯಿ ನಿಷೇಧವಾಗುವುದಿಲ್ಲ ಎಂದು ಛತ್ತೀಸ್‌ಗಢದ ಅಬಕಾರಿ ಸಚಿವ ಕವಾಸಿ ಲಖಮಾ ಘೋಷಿಸಿದ್ದಾರೆ. ಅವರು ಬಸ್ತಾರ್ ಪ್ರವಾಸದಲ್ಲಿದ್ದಾರೆ. ವೈನ್ ಅನ್ನು ಔಷಧವಾಗಿಯೂ ಸೇವಿಸಬೇಕು. ಅದರಂದ ಕುಡಿದವನೂ ಬಲಿಷ್ಠನಾಗುತ್ತಾನೆ’, ಎಂದೂ ಸಹ ಅವರು ಹೇಳಿದರು.

೧. ಈ ಹೇಳಿಕೆ ಕುರಿತು ಕವಾಸಿ ಲಖಮಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಅವರು ‘ಮದ್ಯಪಾನ ಮಾಡದಿದ್ದರೆ ನನ್ನಿಂದ ಕೆಲಸ ಮಾಡಲು ಆಗುವುದಿಲ್ಲ’ ಎಂದು ಹೇಳುತ್ತಿರುವುದನ್ನು ಕಾಣಬಹುದು.

೨. ಕವಾಸಿ ಲಖಮಾ ತಮ್ಮ ಮಾತನ್ನು ಮುಂದುವರೆಸುತ್ತಾ, ಪುರಸಭೆಯೊಂದಿಗೆ ಎಂ.ಎಂ.ಡಿ.ಸಿ.ಯ ಗಣಿ ಮತ್ತು ಇತರ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಾಯಿ ಅಗತ್ಯವಿದೆ ಎಂದು ಹೇಳಿದರು. ಸರಾಯಿ ನೋವನ್ನು ಮರೆಯುವಂತೆ ಮಾಡುತ್ತದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಡಾ. ರಮಣ್ ಸಿಂಗ್ ಮತ್ತು ಬ್ರಿಜಮ್ಮೋಹನ್ ಅಗ್ರವಾಲ್ ಅವರಿಗೆ ಇದು ತಿಳಿದಿರುವುದಿಲ್ಲ; ಏಕೆಂದರೆ ಅವರು ತಮ್ಮ ಇಡೀ ಜೀವನದಲ್ಲಿ ಗೋಣಿಚೀಲವನ್ನು ಎತ್ತಲಿಲ್ಲ ಅಥವಾ ಯಾವುದೇ ಭಾರವಾದ ಕೆಲಸವನ್ನು ಮಾಡಿಲ್ಲ. ವಿದೇಶದಲ್ಲಿ ಶೇ. ೧೦೦ ರಷ್ಟು ಜನರು, ಬಸ್ತಾರ್‌ನಲ್ಲಿ ಶೇ. ೯೦ ರಷ್ಟು ಜನರು ಸರಾಯಿ ಕುಡಿಯುತ್ತಾರೆ. ಬಸ್ತಾರ್‌ನಲ್ಲಿ ಸರಾಯಿ ನಿಷೇಧ ಎಂದಿಗೂ ಆಗುವುದಿಲ್ಲ. ಏಕೆಂದರೆ ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಸರಾಯಿ ಕುಡಿಯಲಾಗುತ್ತದೆ, ಪ್ರಾಚೀನ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಸಚಿವ ಇದ್ದರೆ ಎಂದಾದರೂ ಸರಾಯಿ ನಿಷೇಧವಾಗಲಿ ಅಥವಾ ಜನರ ಸರಾಯಿ ಚಟ ತೊಲಗಿಸುವ ಪ್ರಯತ್ನಗಳು ಆಗಬಹುದೇ ?