|
ಜಮಶೇದಪುರ (ಜಾರ್ಖಂಡ್) – ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ಮತಾಂಧ ಸಂಘಟನೆಯ ಸದಸ್ಯರು ಶ್ರೀರಾಮನವಮಿಯಂದು ಹಾಕಿದ್ದ ಧಾರ್ಮಿಕ ಧ್ವಜವನ್ನು ಅಪವಿತ್ರಗೊಳಿಸಿದ್ದಕ್ಕಾಗಿ ಎರಡು ಗುಂಪುಗಳ ನಡುವೆ ಮತ್ತೆ ಹಿಂಸಾಚಾರ ಸಂಭವಿಸಿದೆ. ಜೆಮ್‌ಶೆಡ್‌ಪುರದಲ್ಲಿನ ಕದಮ ಶಾಸ್ತ್ರಿನಗರ ಇಲ್ಲಿ ಭೂಗಿಲೆದ್ದ ಹಿಂಸಾಚಾರದ ಸಮಯದಲ್ಲಿ ಮತಾಂಧರು ಕಲ್ಲು ತೂರಾಟ ನಡೆಸಿದರು ಹಾಗೂ ಅನೇಕ ಅಂಗಡಿಗಳು ಮತ್ತು ವಾಹನಗಳನ್ನು ದ್ವಂಸ ಮಾಡಲಾಯಿತು. ಹಾಗೂ ಗುಂಡಿನ ದಾಳಿ ಕೂಡ ನಡೆಸಿದರು. ಕಲ್ಲುತೂರಾಟ ನಡೆಸುವವರು ೬ ಅಂಗಡಿಗಳು ಮತ್ತು ೨ ಬೈಕ್ ಗಳನ್ನು ಸುಟ್ಟು ಹಾಕಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತರುವುದಕ್ಕಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಪೊಲೀಸರು ಗಲಭೆಯ ಪರಿಸರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೂ ಇಂಟರ್ನೆಟ್ ಸೇವೆ ನಿಲ್ಲಿಸಿದರು. (ಹಿಂಸಾಚಾರ ನಡೆದ ನಂತರ ನಿಷೇಧಾಜ್ಞೆ ಜಾರಿ ಮಾಡುವುದಿಲ್ಲ, ಹಿಂಸಾಚಾರ ನಡೆಯಬಾರದು ಇದಕ್ಕಾಗಿ ಜಾಗೃತವಾಗಿದ್ದು ಕೃತಿ ಮಾಡುವ ಪೊಲೀಸರು ಬೇಕು ! – ಸಂಪಾದಕರು)
(ಸೌಜನ್ಯ : Hindustan Times)
೧. ಸುಮಾರು ೩ ಗಂಟೆ ನಡೆದ ಹಿಂಸಾಚಾರದಲ್ಲಿ ಹಿರಿಯ ಪೊಲೀಸ ಅಧಿಕಾರಿ ಪ್ರಭಾತ ಕುಮಾರ ಇವರ ಸಹಿತ ಅನೇಕ ಪೊಲೀಸರು ಗಾಯಗೊಂಡರು. (೩ ಗಂಟೆ ಹಿಂಸಾಚಾರ ನಡೆಸುವ ಮತಾಂಧರನ್ನು ಪೊಲೀಸರು ತಡೆಯಲು ಸಾಧ್ಯವಿಲ್ಲ, ಅಂದರೆ ಇಂತಹ ಪೊಲೀಸರನ್ನು ಹಿಂದೂಗಳು ತೆರಿಗೆ ಕಟ್ಟಿ ಏಕೆ ಸಾಕಬೇಕು ? – ಸಂಪಾದಕರು) ಕಲ್ಲುತೂರಾಟ ಮತ್ತು ಗಲಭೆ ನಡೆಸುವ ೬೦ ಕ್ಕೂ ಹೆಚ್ಚಿನ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
೨. ಪೊಲೀಸ ಅಧಿಕಾರಿ ಪ್ರಭಾತ ಕುಮಾರ ಇವರು ನೀಡಿರುವ ಮಾಹಿತಿಯ ಪ್ರಕಾರ, ಜನರನ್ನು ಚದುರಿಸುವುದಕ್ಕೆ ಪೊಲೀಸರು ಅಶ್ರುವಾಯುವಿನ ಪ್ರಯೋಗ ಮಾಡಿದರು. ಅದರ ಜೊತೆಗೆ ಸಂಪೂರ್ಣ ಪರಿಸರದಲ್ಲಿ ಅರೆಸೇನಾಪಡೆ ಸೈನಿಕರನ್ನು ನೇಮಕಗೊಳಿಸಿದರು.
ರಾಮನವಮಿ ಘರ್ಷಣೆ: ಧ್ವಜ ಅಪವಿತ್ರಗೊಳಿಸಿದ ಘಟನೆ- ಜಮ್ಶೆಡ್ಪುರದಲ್ಲಿ ಮತ್ತೆ ಗಲಭೆ- ನಿಷೇಧಾಜ್ಞೆ ಜಾರಿ#India #Ramnavami #Flag #Jamshedpur #ಒನ್ಇಂಡಿಯಾಕನ್ನಡಸುದ್ದಿhttps://t.co/P2QxWwSQIe
— oneindiakannada (@OneindiaKannada) April 10, 2023
೩. ಪೂರ್ವ ಸಿಂಹಭೂಮ ಜಿಲ್ಲೆಯ ಉಪಯುಕ್ತ ವಿಜಯ ಜಾಧವ ಇವರು, ಕೆಲವು ಸಮಾಜ ಕಂಟಕರು ಶಾಂತಿಭಂಗ ಮಾಡುವ ಪ್ರಯತ್ನ ಮಾಡುತ್ತಾರೆ. ಅವರ ಉದ್ದೇಶ ವಿಫಲಗೊಳಿಸುವುದಕ್ಕಾಗಿ ನಾಗರೀಕರು ಸಹಕಾರ ನೀಡಬೇಕು. (ಸಮಾಜಕಂಟಕರನ್ನು ತಡೆಯುವದಕ್ಕಾಗಿ ನಾಗರಿಕರ ಸಹಾಯ ಕೇಳುವ ಸರಕಾರಕ್ಕೆ ನಾಚಿಗೇಡು ! ಜಿಲ್ಲಾ ಆಯುಕ್ತರು ಪೊಲೀಸರಿಗೆ ಸಮಾಜಕಂಟಕರ ಮೇಲೆ ಅಂಕುಶ ವಿಡುವಂತೆ ಕ್ರಮ ಕೈಗೊಳ್ಳುವ ಆದೇಶ ನೀಡುವುದು ಅಪೇಕ್ಷಿತವಾಗಿದೆ ! – ಸಂಪಾದಕರು)
೪. ಈ ಹಿಂದೆ ಮಾರ್ಚ್ ೩೧ ರಂದು ಜಾರ್ಖಂಡನಲ್ಲಿನ ಜೆಮ್‌ಶೆಡ್‌ಪುರ ಇಲ್ಲಿಯ ಜುಗಸಲಾಯಿ ಪ್ರದೇಶದಲ್ಲಿ ಶ್ರೀರಾಮನವಮಿಯ ಮೆರವಣಿಗೆಗೆ ವಿರೋಧಿಸುತ್ತಾ ಮತಾಂತ ಮುಸಲ್ಮಾನರು ಕಲ್ಲುತೂರಾಟ ನಡೆಸಿದ್ದರು. ಈ ಸಮಯದಲ್ಲಿ ಅವರು ರಸ್ತೆಯಲ್ಲಿ ಟೈಯರ್ ಸುಟ್ಟು ಪೊಲೀಸರ ವಾಹನಗಳನ್ನು ಧ್ವಂಸಗೊಳಿಸಿದ್ದರು. ಪೊಲೀಸರು ಶ್ರೀರಾಮನವಮಿಯ ಮೆರವಣಿಗೆ ನಿಲ್ಲಿಸಿರುವುದರಿಂದ ಹಿಂದೂಗಳು ಅಸಮಾಧಾನಗೊಂಡಿದ್ದರು. ಅವರು ಇಲ್ಲಿಯ ಬಾಟಾ ವೃತ್ತದಲ್ಲಿ ಹನುಮಾನ ಚಾಲಿಸಾ ಪಠಣ ಆರಂಭಿಸಿದ್ದರು.
ಹಿಂಸಾಚಾರ ಏಕೆ ನಡೆಯಿತು ?
ಕದಮ ಶಾಸ್ತ್ರೀ ನಗರ ಬ್ಲಾಕ್ ಕ್ರಮಾಂಕ ೩ ರ ವೃತ್ತದಲ್ಲಿ ಏಪ್ರಿಲ್ ೯ ರ ಸಂಜೆ ಮತಾಂಧ ಮುಸಲ್ಮಾನರು ಮಾಂಸ ತುಂಬಿರುವ ಪ್ಲಾಸ್ಟಿಕ್ ಚೀಲ ಧರ್ಮಧ್ವಜದ ಕೋಲಿಗೆ ಕಟ್ಟಿದ್ದರು. ಬ್ಲಾಕ್ ಕ್ರಮಾಂಕ ೨ ಇಲ್ಲಿ ಜಟಾಧಾರಿ ಹನುಮಾನ ದೇವಸ್ಥಾನದಲ್ಲಿ ಹಿಂದೂಗಳ ಸಂಘಟನೆಯ ಸಭೆ ನಡೆಯಿತು. ಈ ಸಭೆಯಲ್ಲಿ ಇಲ್ಲಿಯ ವೃತ್ತಕ್ಕೆ ‘ಭಜರಂಗಬಲಿ ಚೌಕ’ ಎಂದು ನಾಮಕರಣ ಮಾಡುವುದು ನಿಶ್ಚಯಿಸಿದರು. ಆದ್ದರಿಂದ ಈ ಸಭೆಗೆ ಕಲ್ಲುತೂರಾಟ ಆರಂಭವಾಗಿ ಅದರ ನಂತರ ಹಿಂಸಾಚಾರ ಭುಗಿಲೆದ್ದಿತು.
ಸಂಪಾದಕೀಯ ನಿಲುವುಜಾರ್ಖಂಡದಲ್ಲಿ ಹಿಂದೂದ್ರೋಹಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಮತಾಂಧ ಮುಸಲ್ಮಾನರು ಚಿಗುರಿದ್ದಾರೆ. ಈ ರೀತಿಯ ದಾಳಿಗಳು ನಡೆಯುವುದು, ಇದು ಜಾರ್ಖಂಡ ಮುಕ್ತಿ ಮೋರ್ಚಾದಂತ ಹಿಂದೂದ್ರೋಹಿ ಪಕ್ಷವನ್ನು ಆರಿಸಿ ಅಧಿಕಾರದಲ್ಲಿ ಕೂಡಿಸಿರುವುದರಿಂದ ಹಿಂದೂಗಳಿಗೆ ಶಿಕ್ಷೆಯೇ ಆಗಿದೆ ! ಹಿಂದೂಗಳ ಮೇಲೆ ಈ ರೀತಿ ದಾಳಿ ನಡೆಯುವುದಕ್ಕೆ ಜೆಮ್‌ಶೆಡ್‌ಪುರ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೋ ? |