ಹಸ್ತಿನಾಪುರ (ಉತ್ತರಪ್ರದೇಶ) ಇಲ್ಲಿ ಹಿಂದೂ ಯುವಕನ ಹತ್ಯೆಯನಂತರ ಗ್ರಾಮಸ್ಥರಿಂದ ಮತಾಂಧ ಆರೋಪಿಯ ಮನೆ ಧ್ವಂಸ !

ಹೊಲ ಮತ್ತು ಟ್ರ್ಯಾಕ್ಟರ್ ಸುಟ್ಟು ಹಾಕಿದರು !

ಎಸ್ಎಸ್ಪಿ ರೋಹಿತ್ ಸಿಂಗ್ ಸಜ್ವಾನ್ ಗ್ರಾಮಕ್ಕೆ ತಲುಪಿ ಜನರೊಂದಿಗೆ ಮಾತನಾಡಿದರು ಮತ್ತು ವಿಷಯವನ್ನು ಶಾಂತಗೊಳಿಸಿದರು

ಮೇರಠ (ಉತ್ತರಪ್ರದೇಶ) – ಮೇರಠ ಬಳಿ ಇರುವ ಹಸ್ತಿನಾಪುರದಲ್ಲಿ ಏಪ್ರಿಲ್ ೯ ರಂದು ವಿಶೂ ಎಂಬ ಹಿಂದೂ ಯುವಕನಿಗೆ ಗುಂಡಿಟ್ಟು ಕೊಲೆ ಮಾಡಿದ್ದರು. ಈ ಘಟನೆಯ ನಂತರ ಸಮೂಹವು ಏಪ್ರಿಲ್ ೧೦ ರಂದು ಮತಾಂಧ ಮುಸಲ್ಮಾನ ಆರೋಪಿಯ ಮನೆಯ ಮೇಲೆ ಕಲ್ಲು ತೂರಾಟ ನಡೆಸಿ ಅವನ ಹೊಲಕ್ಕೆ ಮತ್ತು ಟ್ಯಾಕ್ಟರಗೆ ಬೆಂಕಿ ಹಚ್ಚಿದ್ದಾರೆ. ಈ ವಿಷಯ ತಿಳಿಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು, ಹಾಗೂ ಹೊಲಕ್ಕೆ ಹಚ್ಚಲಾದ ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡಿದರು.

೧ . ವಿಶೂ ಇಲ್ಲಿಯ ಶಾಲೆಯ ಕಟ್ಟೆಯ ಮೇಲೆ ಕುಳಿತಿರುವಾಗ ಬೈಕ್ ಮೇಲೆ ಬಂದಿದ್ದ ಯುವಕರಲ್ಲಿ ಒಬ್ಬನು ವಿಶೂನ ಬೆನ್ನಿಗೆ ಗುಂಡು ಹಾರಿಸಿ ಓಡಿ ಹೋದನು. ವಿಶೂಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಡಾಕ್ಟರರು ಅವನನ್ನು ಮೃತಪಟ್ಟನೆಂದು ಹೇಳಿದರು. ಮರುದಿನ ಅವನ ಶವ ಗ್ರಾಮಕ್ಕೆ ತಂದ ನಂತರ ಆಕ್ರೋಶಗೊಂಡಿರುವ ಗ್ರಾಮಸ್ಥರು ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದರು.

ಮನೆಗಳಿಗೆ ಬೆಂಕಿ

೨. ಗ್ರಾಮಸ್ಥರು, ಈ ಗ್ರಾಮದಲ್ಲಿ ಸತತ ವಿವಾದಗಳು ನಡೆಯುತ್ತವೆ. ಹೋಳಿಯ ಸಮಯದಲ್ಲಿ ಇಲ್ಲಿ ವಾದ ವಿವಾದ ನಡೆದು ಹಿಂಸಾಚಾರ ನಡೆದಿತ್ತು. ಅದರಲ್ಲಿ ಕೆಲವು ಜನರು ಗಾಯಗೊಂಡಿದ್ದರು. ಅದರ ಹಿಂದೆ ಕೂಡ ಹಿಂಸಾಚಾರ ನಡೆದಿತ್ತು. (ಮತಾಂಧರಿಂದ ಸತತವಾಗಿ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿದ್ದರೆ, ಪೊಲೀಸರು ಮತ್ತು ಸರಕಾರ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ, ಇದೇ ಇದರಿಂದ ಗಮನಕ್ಕೆ ಬರುತ್ತದೆ ! ಹಿಂದೂಗಳ ಸಂರಕ್ಷಣೆ ಮಾಡುವುದಕ್ಕಾಗಿ ಈಗ ಹಿಂದೂಗಳೇ ಸಂಘಟಿತರಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು ಅವಶ್ಯಕ ! – ಸಂಪಾದಕರು)

 

ಸಂಪಾದಕರ ನಿಲುವು

ಮತಾಂಧರಿಂದ ನಡೆಯುತ್ತಿರುವ ಹಿಂದೂಗಳ ಹತ್ಯೆಗಳು ಹಾಗೂ ಅವರ ಮೇಲಿನ ದಾಳಿಗಳು ನಿಲ್ಲದೆ ಇರುವುದರಿಂದ ಮತ್ತು ಪೊಲೀಸರು ಕೂಡ ಈ ದಾಳಿಗಳನ್ನು ತಡೆಯುವಲ್ಲಿ ಮತ್ತು ಮತಾಂಧರ ಮೇಲೆ ಅಂಕುಶ ಇಡುವಲ್ಲಿ ವಿಫಲರಾಗಿರುವುದರಿಂದ ಹಿಂದೂಗಳು ಸೆಟೆದು ನಿಲ್ಲುತ್ತಿದ್ದಾರೆ, ಅದಕ್ಕೆ ಯಾರು ಹೊಣೆ ? ಇದರ ಬಗ್ಗೆ ಯೋಚನೆ ಮಾಡುವುದು ಅವಶ್ಯಕ !