ಪ್ರಧಾನಿ ಮೋದಿಯವರಿಂದ ಕರ್ನಾಟಕದ ಬಂಡೀಪುರ ಅರಣ್ಯಕ್ಕೆ ಭೇಟಿ

ಬೆಂಗಳೂರು – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಪ್ರಿಲ್ 9 ರಂದು ರಾಜ್ಯದ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದರು. ಹಾಗೆಯೇ `ಟೈಗರ ಯೋಜನೆ’ಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರು ದೇಶದಲ್ಲಿರುವ ಹೊಸ ಹುಲಿ ಗಣತಿಯನ್ನು ಘೋಷಿಸಿದರು. ಈ ಗಣತಿಯನುಸಾರ ದೇಶದಲ್ಲಿ 3 ಸಾವಿರ 167 ಹುಲಿಗಳಿವೆ. ಪ್ರಧಾನಮಂತ್ರಿ ಮೋದಿಯವರು ಬಳಿಕ ತಮಿಳುನಾಡಿನ ಗಡಿಯಂಚಿನಲ್ಲಿರುವ ಮುದುಮಲೈ ನ್ಯಾಶನಲ್ ಪಾರ್ಕಿಗೆ ಭೇಟಿ ನೀಡಿದರು. ಮತ್ತು ಇಲ್ಲಿಯ ತೆಪ್ಪಕಾಡು ಎಲಿಫೆಂಟ್ ಕ್ಯಾಂಪಿಗೂ ಅವರು ಭೇಟಿ ನೀಡಿದರು.

(ಸೌಜನ್ಯ : Tv9 Kannada)