ತೇಲಂಗಾಣ ಸರಕಾರದ ಅಡಚಣೆಯಿಂದ ಜನತೆಗೆ ಸಂಕಷ್ಟ ! – ಪ್ರಧಾನಿ ಮೋದಿ

ಬಲಬದಿಗೆ ಪ್ರಧಾನಿ ನರೇಂದ್ರ ಮೋದಿ

ಭಾಗ್ಯನಗರ – ರಾಜ್ಯ ಸರಕಾರ ನಮಗೆ ಸಹಕರಿಸದೇ ಇದ್ದರಿಂದ ಅನೇಕ ಅಭಿವೃದ್ಧಿ ಕಾರ್ಯಗಳು ವಿಳಂಬಗೊಳ್ಳುತ್ತಿವೆ. ಈ ಜನರು ಕೌಟುಂಬಿಕ ಕಲಹ, ಮನೆತನ ಮತ್ತು ಭ್ರಷ್ಟಾಚಾರಕ್ಕೆ ಪುಷ್ಟಿಕೊಡುತ್ತಿರುವುದರಿಂದ ಪ್ರಾಮಾಣಿಕವಾಗಿ ಕಾರ್ಯವನ್ನು ಮಾಡುತ್ತಿರುವವರಿಗೆ ಅಡ್ಡಿ ಆತಂಕಗಳು ಎದುರಾಗುತ್ತಿವೆ. ರಾಜ್ಯ ಸರಕಾರದ ಅಡಚಣೆಗಳಿಂದ ತೇಲಂಗಾಣದ ಜನತೆ ತೊಂದರೆಗೊಳಗಾಗಿದ್ದಾರೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟೀಕಿಸಿದರು. ಮೋದಿಯವರು ಸಿಕಂದರಾಬಾದ – ತಿರುಪತಿ ಈ ಮಾರ್ಗದಲ್ಲಿ ಓಡಲಿರುವ `ವಂದೇ ಭಾರತ’ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದರು, ಈ ಸಂದರ್ಭದಲ್ಲಿ ಮೋದಿಯವರು ವಿರೋಧ ಪಕ್ಷವನ್ನು ಟೀಕಿಸಿದರು. ಆದರೆ ತೇಲಂಗಾಣದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳಲು ನಾವು ಬಿಡುವುದಿಲ್ಲ. ಕೇಂದ್ರ ಸರಕಾರದ ನೇರ ಪ್ರಯೋಜನ ದೊರಕುವ ಯೋಜನೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಇದರಿಂದ ರೈತರು, ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಕಳುಹಿಸಲಾಗುತ್ತಿದೆ’ ಎಂದೂ ಪ್ರಧಾನಮಂತ್ರಿಗಳು ಹೇಳಿದರು.

ಪ್ರಧಾನಮಂತ್ರಿಗಳು ತಮ್ಮ ಮಾತನ್ನು ಮುಂದುವರಿಸುತ್ತಾ, ಕೊರೊನಾ ಕಾಲದಲ್ಲಿ ಅತ್ಯುತ್ತಮ ಆರ್ಥವ್ಯವಸ್ಥೆಯನ್ನು ಹೊಂದಿರುವ ದೇಶಗಳ ಆರ್ಥಿಕತೆಯನ್ನು ಸಂಪೂರ್ಣವಾಗಿ ಕುಸಿದಿತ್ತು ಆದರೆ ಭಾರತ ಮಾತ್ರ ಮುಂದುವರಿಯುತ್ತಿದೆ. ತೇಲಂಗಾಣದ ಅಭಿವೃದ್ಧಿಗಾಗಿ ಕಳೆದ 9 ವರ್ಷಗಳಲ್ಲಿ ರೇಲ್ವೆ ಮುಂಗಡಪತ್ರದಲ್ಲಿ ಸುಮಾರು 17 ಪಟ್ಟುಗಳಷ್ಟು ಹೆಚ್ಚಿಸಲಾಗಿದೆ. ಹೊಸ ರೇಲ್ವೆ ಮಾರ್ಗ ನಿರ್ಮಾಣ ಅಥವಾ ಜೋಡಿ ಮಾರ್ಗಗಳ ಕಾಮಗಾರಿಗಳು ಕೇಂದ್ರ ಸರಕಾರದ ನಿರಂತರ ಪ್ರಯತ್ನದಿಂದ ಕೈಗೂಡಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಕೂಡ ಕೈಕೊಳ್ಳಲಾಗಿದೆ ಎಂದು ಹೇಳಿದರು.