ದೇಶದ ಜೈಲುಗಳಲ್ಲಿರುವ ಶೇ.೭೭ ರಷ್ಟು ಕೈದಿಗಳ ವಿರುದ್ಧದ ಪ್ರಕರಣಗಳು ಬಾಕಿ !

ನವ ದೆಹಲಿ – ದೇಶದಲ್ಲಿನ ಜೈಲುಗಳಲ್ಲಿ ಕೇವಲ ಶೇಕಡಾ ೨೨ ರಷ್ಟು ಕೈದಿಗಳು ತಮ್ಮ ಅಪರಾಧಗಳು ಸಾಬೀತಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ, ಆದರೆ ಶೇಕಡಾ ೭೭ ರಷ್ಟು ಕೈದಿಗಳ ಮೊಕದ್ದಮೆಗಳು ಬಾಕಿಯಿರುವುದರಿಂದ ಇನ್ನೂ ಜೈಲುಗಳಲ್ಲಿ ಬಂಧಿಯಾಗಿದ್ದಾರೆ. ಈ ಮಾಹಿತಿಯನ್ನು ‘ಇಂಡಿಯಾ ಜಸ್ಟೀಸ್’ ವರದಿಯಿಂದ ಬೆಳಕಿಗೆ ಬಂದಿದೆ. ೨೦೧೦ ರಲ್ಲಿ ಈ ಸಂಖ್ಯೆ ೨ ಲಕ್ಷ ೪೦ ಸಾವಿರ ಇತ್ತು, ೨೦೨೧ ರಲ್ಲಿ ದ್ವಿಗುಣವಾಗಿ ೪ ಲಕ್ಷ ೩೦ ಸಾವಿರಕ್ಕೆ ಏರಿದೆ, ಅಂದರೆ ಶೇಕಡಾ ೭೮ ರಷ್ಟು ಹೆಚ್ಚಳವಾಗಿದೆ.

ಜೈಲುಗಳಲ್ಲಿ ಹೆಚ್ಚು ಕಾಲ ಉಳಿಯುವುದರ ಪರಿಣಾಮ !

ವರದಿಯಲ್ಲಿ, ಮೊಕದ್ದಮೆಗಳು ಬಾಕಿ ಇರುವ ಬಂಧಿತರನ್ನು ದೀರ್ಘಕಾಲ ಬಂಧಿಸಿರುವುದರಿಂದ, ಮೊಕದ್ದಮೆಯನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಇದು ಆಡಳಿತಾತ್ಮಕ ಕೆಲಸವನ್ನು ಹೆಚ್ಚಿಸುವುದಲ್ಲದೆ ಪ್ರತಿಯೊಬ್ಬ ಕೈದಿಯ ಮೇಲೆ ಮಾಡುವ ಖರ್ಚು ಹೆಚ್ಚಿಸುತ್ತದೆ. ಇದರ ಹೊರೆ ಸರಕಾರದ ಬೊಕ್ಕಸಕ್ಕೆ ಬೀಳುತ್ತದೆ.

ಸಂಪಾದಕರ ನಿಲುವು

ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧದ ಮೊಕದ್ದಮೆಗಳನ್ನು ಬಾಕಿ ಇಡುವುದು ಆರೋಪಿ ಮತ್ತು ದೂರು ನೀಡಿದವ ಇಬ್ಬರಿಗೂ ಅನ್ಯಾಯವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು, ಸರಕಾರವು ಸಮಾರೋಪಾದಿಯಲ್ಲಿ ಪ್ರಯತ್ನಿಸುವ ಅವಶ್ಯಕತೆ ಇದೆ !