ಮುಸಲ್ಮಾನ ಸಹೋದರಿಯರು ಮತ್ತು ಹುಡುಗಿಯರು ಹಿಂದೂ ಹುಡುಗರ ಜೊತೆ ವಿವಾಹವಾಗಿ !

ವಿಶ್ವ ಹಿಂದೂ ಪರಿಷತ್ತಿನ ನಾಯಕಿ ಸಾಧ್ವಿ ಪ್ರಾಚಿ ಇವರ ಹೇಳಿಕೆ

ವಿಶ್ವ ಹಿಂದೂ ಪರಿಷತ್ತಿನ ನಾಯಕಿ ಸಾಧ್ವಿ ಪ್ರಾಚಿ

ಬರೆಲಿ (ಉತ್ತರಪ್ರದೇಶ) – ಮುಸಲ್ಮಾನ ಸಹೋದರಿಯರು ಮತ್ತು ಹುಡುಗಿಯರು ಹಿಂದೂ ಹುಡುಗರ ಜೊತೆ ವಿವಾಹ ಮಾಡಿಕೊಂಡರೆ ಅವರಿಗೆ ಲಾಭದಾಯಕವಾಗುವುದು. ಅವರು ಆನಂದದ ಜೀವನ ನಡೆಸಬಹುದ. ಅವರಿಗೆ ಕಪ್ಪು ಬಟ್ಟೆಯಲ್ಲಿ ಇರಬೇಕಾಗಿಲ್ಲ ಹಾಗೂ ಅವರಿಗೆ ತ್ರಿವಳಿ ತಲಾಖ್ ಮತ್ತು ಹಾಲಾಲಾ ಎದುರಿಸಬೇಕಾಗಿಲ್ಲ, ಎಂದು ವಿಶ್ವ ಹಿಂದೂ ಪರಿಷತ್ತಿನ ನಾಯಕಿ ಸಾಧ್ವಿ ಪ್ರಾಚಿ ಇವರು ಹೇಳಿದರು.

ಭಾರತದಲ್ಲಿ ವಾಸಿಸುವ ಜನರ ‘ಡಿ.ಎನ್.ಎ.’ (ವ್ಯಕ್ತಿಯ ಮೂಲ ಪರಿಚಯ ಸಾಬೀತಪಡಿಸುವ ಶರೀರದಲ್ಲಿನ ಘಟಕ) ಪರೀಕ್ಷೆ ಮಾಡಿದರೆ, ಪ್ರತಿಯೊಬ್ಬರ ಪೂರ್ವಜರು ಪ್ರಭು ಶ್ರೀರಾಮ, ಶ್ರೀ ಕೃಷ್ಣ ಮತ್ತು ಬಾಬಾ ಭೋಲೆನಾಥ ಇರುವುದು ಗಮನಕ್ಕೆ ಬರುವುದು, ಎಂದು ಕೂಡ ಅವರು ಹೇಳಿದರು.

ಶ್ರೀರಾಮನವಮಿಯ ದಿನದಂದು ಬಿಹಾರ ಮತ್ತು ಬಂಗಾಲದಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಸಾಧ್ವಿ ಪ್ರಾಚಿ ಇವರು, ಮಮತಾ ಬ್ಯಾನರ್ಜಿ ಮುಸಲ್ಮಾನರ ಓಲೈಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ‘ಇಫ್ಟಾರ್ ಪಾರ್ಟಿ’ಯಲ್ಲಿ ಮಗ್ನರಾಗಿದ್ದಾರೆ. ಬಿಹಾರ ಮತ್ತು ಬಂಗಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು, ಎಂದು ಹೇಳಿದರು.