ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿನ ಘಟನೆ
ಡೇಹರಾಡೂನ್ (ಉತ್ತರಾಖಂಡ) – ಉತ್ತರಖಂಡ ಮತ್ತು ಉತ್ತರ ಪ್ರದೇಶ ರಾಜ್ಯದ ಗಡಿಯಲ್ಲಿ ಒಂದು ಪ್ರಸಿದ್ಧ ‘ಚಿತಳ ಢಾಬಾ’ ಇದೆ. ಜನರು ವರ್ಷಾಗಳಿಂದ ಅಲ್ಲಿ ಭೋಜನಕ್ಕಾಗಿ ಬರುತ್ತಾರೆ; ಆದರೆ ಬರುವ ಶೇಕಡ ೯೦ ಕ್ಕಿಂತಲೂ ಹೆಚ್ಚಿನ ಜನರಿಗೆ ಈ ಢಾಬಾ ಮುಸಲ್ಮಾನರದಾಗಿದೆ ಎಂದು ತಿಳಿದಿಲ್ಲ. ಅಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರು ಮುಸಲ್ಮಾನರಾಗಿದ್ದು ಇಲ್ಲಿ ಶುದ್ಧ ವೈಷ್ಣವ ಭೋಜನ ಉಪಲಬ್ಧವಿರುವುದೆಂದು ದಾವೆ ಮಾಡಲಾಗುತ್ತದೆ. ಈ ಪ್ರದೇಶದಲ್ಲಿ ಇಂತಹ ಅನೇಕ ಢಾಬಾಗಳು ಇದ್ದು ಅವುಗಳ ಹೆಸರು ‘ಗಢವಾಲ ಢಾಬಾ’, ‘ಜಾಯಕಾ ಢಾಬಾ’, ‘ಗುಲಶನ ಢಾಬಾ’, ‘ಅಮನ ಢಾಬಾ’, ‘ನೀಲಕಂಠ ಢಾಬಾ’, ‘ಮಹಾದೇವ ಢಾಬಾ’ ಹೀಗೆ ಇದೆ; ಆದರೆ ಅದರ ಮಾಲೀಕರು ಮುಸಲ್ಮಾನರಾಗಿರುವುದು ಕಂಡು ಬಂದಿದೆ.
ಹರಿದ್ವಾರ ಮತ್ತು ನಜಿಬಾಬಾದ ಮಾರ್ಗದಲ್ಲಿ ಅನೇಕ ಢಾಬಾಗಳು ಇದ್ದು ಅದನ್ನು ಮುಸಲ್ಮಾನರು ನಡೆಸುತ್ತಾರೆ; ಆದರೆ ಅವರ ಫಲಕದ ಮೇಲೆ ಹಿಂದೂ ದೇವತೆಗಳ ದೊಡ್ಡ ದೊಡ್ಡ ಚಿತ್ರಗಳನ್ನು ಹಾಕಿದ್ದಾರೆ. ಹಾಗೂ ಅದರ ಮೇಲೆ ‘ಶುದ್ದ ವೈಷ್ಣವ ಢಾಬಾ’ ಹೇಗೆ ಬರೆದಿದ್ದಾರೆ. ಇಲ್ಲಿ ‘ಗೂಗಲ್ ಪೇ’ ಅಥವಾ ‘ಪೇಟಿಮ’ ನಿಂದ ಹಣ ನೀಡಿದಾಗ ಅವರ ನಿಜ ಹೆಸರು ಬೆಳಕಿಗೆ ಬಂದಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿನ ಮೆರಠ, ಗಜರೌಲಾ, ಗಡ ಮುಕ್ತೇಶ್ವರ, ಮುಂಡಪಾಂಡೆ ಹೆದ್ದಾರಿಯಲ್ಲಿ ಇಂತಹ ಹಿಂದೂಗಳ ದೇವತೆಗಳ ಹೆಸರು ಇರುವ ಅನೇಕ ಢಾಬಾ ಇವೆ; ಆದರೆ ಮಾಲೀಕರು ಮತ್ತು ಕಾರ್ಮಿಕರು ಮುಸಲ್ಮಾನರಿದ್ದಾರೆ. ಇತ್ತೀಚಿಗೆ ಹರಿದ್ವಾರ ದೇಹಾತದಲ್ಲಿನ ಢಾಬಾದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಕಲಬೆರಿಕೆ ಮಾಡಿರುವ ವಾರ್ತೆ ಪ್ರಸಾರವಾಗಿದೆ.
ಸಂಪಾದಕೀಯ ನಿಲುವು
|