ಆಸ್ಸಾಂ ವಿಧಾನಸಭೆಯಲ್ಲಿ ಗದ್ದಲ : 3 ಶಾಸಕರ ಅಮಾನತ್ತು

ರಾಹುಲ ಗಾಂಧಿಯ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಪ್ರಕರಣ !

ರಾಹುಲ ಗಾಂಧಿ

ಗೌಹಾಟಿ – ರಾಹುಲ ಗಾಂಧಿಯವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ನಿಷೇಧಿಸಿ ಕಾಂಗ್ರೆಸ್ಸಿನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸುವ ಪ್ರಸ್ತಾವನೆಯ ವಿಷಯದಲ್ಲಿ ಆಸ್ಸಾಂ ವಿಧಾನಸಭೆಯಲ್ಲಿ ಗದ್ದಲ ನಡೆಯಿತು. ಸಭಾಪತಿ ವಿಶ್ವಜಿತ ಡೆಮರಿಯವರು ಸದನದ ಕಾರ್ಯಕಲಾಪಗಳನ್ನು ಎರಡು ಬಾರಿ ಮುಂದೂಡಿದರು. ಹಾಗೆಯೇ ಕಾಂಗ್ರೆಸ್ಸಿನ 2 ಶಾಸಕರು ಮತ್ತು 1 ಸ್ವತಂತ್ರ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತ್ತುಗೊಳಿಸಲಾಯಿತು. ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಲು ಕಪ್ಪು ಬಟ್ಟೆಗಳನ್ನು ಹಾಕಿ ಸದನಕ್ಕೆ ಬಂದಿದ್ದರು.

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸುವ ಕಾಂಗ್ರೆಸ್ಸಿನ ಪ್ರಸ್ತಾವನೆಯನ್ನು ವಿರೋಧಿಸಿದರು, ಅವರು, ’’ನಾಳೆ ನ್ಯಾಯಾಲಯ ನನ್ನನ್ನು ಆರೋಪಿಯೆಂದು ನಿರ್ಧರಿಸಿದರೆ ಭಾಜಪ ಶಾಸಕರು ಕಪ್ಪು ಬಟ್ಟೆಯನ್ನು ಹಾಕಿ ಪ್ರತಿಭಟನೆ ಮಾಡುವುದಿಲ್ಲ. ನಾವು ಉಚ್ಚ ನ್ಯಾಯಾಲಯಕ್ಕೆ, ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುತ್ತೇವೆ, ಆದರೆ ನ್ಯಾಯವ್ಯವಸ್ಥೆಯ ಅವಹೇಳನವನ್ನು ಮಾಡುವುದಿಲ್ಲ. ಈ ನಡುವಳಿಕೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ” ಎಂದು ಹೇಳಿದರು. ತದನಂತರ ಸಭಾಪತಿಗಳು ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸುವ ಪ್ರಸ್ತಾವನೆಯನ್ನು ತಿರಸ್ಕರಿಸಿದರು.