ಶಾಮಲಿಯ (ಉತ್ತರ ಪ್ರದೇಶ) ಕುಖ್ಯಾತ ರೌಡಿ ಜಬರುದ್ದೀನ್ ನನ್ನು ಬಂಧಿಸಿದ್ದಕ್ಕೆ ಮುಸಲ್ಮಾನರಿಂದ ಪೊಲೀಸರ ಮೇಲೆ ಹಲ್ಲೆ !

  • ಪೊಲೀಸರ ಆಯುಧಗಳ ಸಹಿತ ಜಬರುದ್ದೀನ್ ನನ್ನು ಬಿಡಿಸಿಕೊಂಡು ಹೋದರು !

  • ೬ ಜನರ ಬಂಧನ !

ಶಾಮಲಿ (ಉತ್ತರ ಪ್ರದೇಶ) – ಇಲ್ಲಿನ ಕೆರಟು ಗ್ರಾಮದಲ್ಲಿ ರೌಡಿ ಜಬುರುದ್ದೀನ್ ನನ್ನು ಬಂಧಿಸಲು ಹೋಗಿದ್ದ ಹರಿಯಾಣಾ ಪೊಲೀಸ್ ವಿಶೇಷ ಕೃತಿ ಪಡೆಯ ಪೊಲೀಸರ ಮೇಲೆ ಸ್ಥಳೀಯ ಮುಸಲ್ಮಾನರು ದಾಳಿ ನಡೆಸಿ ಅವರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡರು. ಹಾಗೂ ಪೊಲೀಸರನ್ನು ಥಳಿಸಿದ್ದರಿಂದ ೩ ಪೊಲೀಸರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಸಲ್ಮಾನರು ಆರೋಪಿ ಜಬರುದ್ದೀನ್‌ನನ್ನು ಪೊಲೀಸರಿಂದ ತಪ್ಪಿಸಿ ಪರಾರಿಯಾಗಲು ಅವಕಾಶ ಮಾಡಿಕೊಟ್ಟರು. ಈ ಪ್ರಕರಣದಲ್ಲಿ ೬ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ರೀತಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಸಹ ಮರಳಿಪಡೆಯಲಾಗಿದೆ. ಒಟ್ಟು ೪೦ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಬರುದ್ದೀನ್ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಿದ್ದು, ಮಾಹಿತಿ ನೀಡಿದವರಿಗೆ ೨೫ ಸಾವಿರ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಕಾನೂನು ಬಾಹಿರ ಕೃತ್ಯದ ಬಗ್ಗೆ ಉತ್ತರ ಪ್ರದೇಶದ ಭಾಜಪ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ! ಯಾವರೀತಿ ದರೋಡೆಕೋರರ ಮತ್ತು ಅವರಿಗೆ ಸಹಾಯ ಮಾಡುವವರ ಮನೆಗಳನ್ನು ನೆಲಸಮ ಮಾಡಲಾಗುತ್ತದೆಯೋ ಅದೇ ರೀತಿ ಈ ಜನರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜನರಿಗೆ ಅನಿಸುತ್ತದೆ !