’ಬಿ.ಬಿ.ಸಿ. ನ್ಯೂಸ ಪಂಜಾಬಿ’ ಯ ಟ್ವಿಟರ ಖಾತೆಯ ಮೇಲೆ ಭಾರತದಲ್ಲಿ ನಿರ್ಬಂಧ !

ನವದೆಹಲಿ – ಕೇಂದ್ರ ಸರಕಾರವು `ಬಿಬಿಸಿ ನ್ಯೂಸ ಪಂಜಾಬಿ’ ಟ್ವಿಟರ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದೆ. ಈ ಖಾತೆಯನ್ನು ತೆರೆದಾಗ ಅಲ್ಲಿ `ಈ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ’, ಎಂದು ಸಂದೇಶ ಬರೆಯಲಾಗಿದೆ. ಖಲಿಸ್ತಾನಿ ಅಮೃತಪಾಲನ ಬೆಂಬಲವಾಗಿ ಪ್ರಸಾರ ಮಾಡಿದ್ದರಿಂದ ಈ ಕ್ರಮವನ್ನು ಕೈಕೊಳ್ಳಲಾಗಿದೆಯೆಂದು ಹೇಳಲಾಗಿದೆ. ಬಿಬಿಸಿಯ ಮೇಲೆ ಈ ಹಿಂದೆಯೂ ಈ ರೀತಿ ಕ್ರಮ ಕೈಕೊಳ್ಳಲಾಗಿತ್ತು. ಈ ಹಿಂದೆ ಕೇಂದ್ರ ಸರಕಾರವು ಬಿಬಿಸಿಯ `ಇಂಡಿಯಾ : ದಿ ಮೋದಿ ಕ್ವೆಶ್ಚನ್’ ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿತ್ತು. ಈ ಸಾಕ್ಷ್ಯಚಿತ್ರ 2002 ರಲ್ಲಿ ನಡೆದ ಗುಜರಾತ ಗಲಭೆಯ ಕುರಿತು ನಿರ್ಮಾಣವಾಗಿತ್ತು.

ಮಾರ್ಚ ೧೯, 2023 ರಂದು ಖಲಿಸ್ತಾನ ಬೆಂಬಲಿಗ ಶಾಸಕ, ಹಾಗೆಯೇ ಶಿರೋಮಣಿ ಅಕಾಲಿ ದಳ(ಅಮೃತಸರ)ದ ಅಧ್ಯಕ್ಷ ಸಿಮರನಜೀತ ಸಿಂಹ ಮಾನ ಇವನ ಟ್ವಿಟರ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಅದರ ಮರುದಿನ ಕೆನಡಾದ ಶಾಸಕ ಜಗಮೀತ ಸಿಂಹ ಇವರ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಆತ ಖಲಿಸ್ತಾನಿ ಅಮೃತಪಾಲ ಪ್ರಕರಣದಲ್ಲಿ ಪಂಜಾಬ ಪೊಲೀಸರ ಕ್ರಮವನ್ನು ಸರಿಯಲ್ಲವೆಂದು ಹೇಳಿದ್ದನು.

ಸಂಪಾದಕೀಯ ನಿಲುವು

ಹಿಂದೂದ್ವೇಷಿ ಮತ್ತು ಭಾರತದ್ವೇಷಿ ಬಿಬಿಸಿಯನ್ನು ಈಗ ಭಾರತವು ಶಾಶ್ವತವಾಗಿ ನಿರ್ಬಂಧಿಸುವ ಆವಶ್ಯಕವಿದೆ !