ಇಂದೂರ (ಮಧ್ಯಪ್ರದೇಶ)ದಲ್ಲಿ ವಿ.ಹಿಂ.ಪ.ನ ಅಧಿಕಾರಿಯ ಶಿರಚ್ಛೇದ ಮಾಡುವುದಾಗಿ ಮುಸಲ್ಮಾನರ ಬೆದರಿಕೆ !

ಸಂತೋಷ್ ಶರ್ಮಾ

ಇಂದೂರ (ಮಧ್ಯಪ್ರದೇಶ) – ಇಲ್ಲಿನ ವಿಶ್ವ ಹಿಂದೂ ಪರಿಷತ್ತಿನ ಧರ್ಮಪ್ರಸಾರದ ಪ್ರಾಂತೀಯ ಸಂಯೋಜಕ ಸಂತೋಷ್ ಶರ್ಮಾ ಅವರಿಗೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಹಸಿರು ಲಕೋಟೆಯಲ್ಲಿ ಕಳುಹಿಸಲಾದ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ. ’ಮುಸ್ಲಿಮರ ವಿರುದ್ಧ ಏನನ್ನೂ ಮಾಡಬೇಡಿ’, ಎಂದು ಅದರಲ್ಲಿ ಹೇಳಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದಾರೆ.

ಈ ಹಿಂದೆ ಇಂದೂರನಲ್ಲಿ ಭಜರಂಗದಳದ ಪದಾಧಿಕಾರಿಗಳಾದ ತನ್ನು ಶರ್ಮಾ, ವಕೀಲ ಅನಿಲ ನಾಯ್ಡು ಮತ್ತು ವಕೀಲ ಮನೀಶ್ ಗಡ್ಕರ್ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ನಂತರ ಪೊಲೀಸರು ಈ ಪ್ರಕರಣದಲ್ಲಿ ಕೆಲವರನ್ನು ಬಂಧಿಸಿದ್ದರು.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರವಿದ್ದಾಗ ಹಿಂದೂ ಸಂಘಟನೆಗಳ ಪದಾಧಿಕಾರಿಗಳಿಗೆ ಇಂತಹ ಬೆದರಿಕೆಗಳನ್ನು ನೀಡುವ ಧೈರ್ಯ ಯಾರಿಗೂ ಇರಬಾರದು ಎಂದು ಹಿಂದೂಗಳು ಭಾವಿಸುತ್ತಾರೆ !