ಕುಖ್ಯಾತ ಗೂಂಡಾ ಆತಿಕ ಅಹಮದ್‌ನನ್ನು ಪೊಲೀಸರು ಗುಜರಾತ್‌ನಿಂದ ಪ್ರಯಾಗರಾಜಗೆ ಕರೆ ತಂದರು !

ಅತೀಕ್ ಅಹ್ಮದ್, ಅಪರಾಧಿ

ಪ್ರಯಾಗರಾಜ (ಉತ್ತರಪ್ರದೇಶ) – ಉತ್ತರಪ್ರದೇಶದ ಕುಖ್ಯಾತ ರೌಡಿ ಆತಿಕ ಅಹಮದ ಇವನು ಗುಜರಾತ್‌ನ ಸಾಬರಮತಿ ಜೈಲಿನಲ್ಲಿ ಬಂದಿತನಾಗಿದ್ದನು. ಅವನಿಗೆ ನ್ಯಾಯವಾದಿ ಉಮೇಶ ಪಾಲ ಇವರ ಹತ್ಯೆಯ ಪ್ರಕರಣದಲ್ಲಿ ವಶಕ್ಕೆ ಪಡೆದು ಉತ್ತರ ಪ್ರದೇಶ ಪೊಲೀಸರಿಂದ ಪ್ರಯಾಗರಾಜಗೆ ಕರೆ ತಂದರು. ಪೊಲೀಸ ವಾಹನದಿಂದ ಸುಮಾರು ೨೦ ಗಂಟೆಯ ಪ್ರಯಾಣ ಮಾಡಿ ಅವನನ್ನು ಪ್ರಯಾಗರಾಜಗೆ ಕರೆತರಲಾಯಿತು. ಈ ಸಮಯದಲ್ಲಿ ಮಧ್ಯಪ್ರದೇಶದ ಶಿವಪುರದಲ್ಲಿ ವಾಹನ ಒಂದು ಹಸುಗೆ ಗುದ್ದಿದ್ದರಿಂದ ಹಸು ಸಾವನ್ನಪಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಆತಿಕಗೆ ಗುಜರಾತ್‌ನಿಂದ ಉತ್ತರ ಪ್ರದೇಶಕ್ಕೆ ಕರೆದೊಯ್ಯುವಾಗ ದಾರಿಯಲ್ಲಿ ಅವನನ್ನು ಚಕಮಕಿಯಲ್ಲಿ ಹತ್ಯೆ ಮಾಡಲಾಗುವುದು, ಎಂಬ ಭಯ ಅವನ ಸಹೋದರಿ ವ್ಯಕ್ತಪಡಿಸಿದ್ದಳು. ಆದ್ದರಿಂದ ಆಕೆ ಸ್ವತಃ ಖಾಸಗಿ ವಾಹನದಿಂದ ಅತಿಕನನ್ನು ಕರೆದೊಯ್ಯುವ ಪೊಲೀಸರ ವಾಹನಗಳ ಜೊತೆ ಪ್ರಯಾಗರಾಜವರೆಗೆ ಬಂದಿದ್ದಳು.

(ಸೌಜನ್ಯ: NEWS18)