ಮುಸಲ್ಮಾನರಿಗೆ ೪ ವಿವಾಹವಾಗುವ ಅನುಮತಿಯ ವಿರುದ್ಧ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ !

ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ನೋಟಿಸ್

ಲಖಿಮಪುರ (ಉತ್ತರಪ್ರದೇಶ) – ಅಲಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ‘ಮುಸ್ಲಿಂ ಪರ್ಸನಲ್ ಲಾ’ (ಶರಿಯತ) ಅರ್ಜಿ ಕಾಯ್ದೆ ೧೯೩೭’ ಕ್ಕೆ ಸವಾಲು ನೀಡುವ ಅರ್ಜಿಯ ಬಗ್ಗೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ‘ಹಿಂದೂ ಪರ್ಸನಲ್ ಲಾ ಬೋರ್ಡ್’ ದಾಖಲಿಸಿರುವ ಅರ್ಜಿಯಲ್ಲಿ ಕಲಂ ೪೯೪ ರ ಸಾಂವಿಧಾನಿಕ ಮಾನ್ಯತೆಗೆ ಕೂಡ ಸವಾಲು ಮಾಡಿದೆ. ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಸುಭಾಷ ವಿದ್ಯಾರ್ಥಿ ಇವರ ಖಂಡಪೀಠದ ಎದುರು ಇದರ ವಿಚಾರಣೆ ನಡೆಯುತ್ತಿದ್ದೂ ಭಾರತದ ಮಹಾನ್ಯಾಯವಾದಿಗಳಿಗೆ ನೋಟಿಸ್ ಜಾರಿ ಮಾಡಿ ಅದಕ್ಕೆ ಆರು ವಾರಗಳಲ್ಲಿ ಉತ್ತರಿಸಲು ಸಮಯಾವಕಾಶ ನೀಡಿದ್ದಾರೆ. ಅರ್ಜಿಯಲ್ಲಿ ಮುಸಲ್ಮಾನರಿಗೆ ೪ ವಿವಾಹ ಮಾಡಿಕೊಳ್ಳುವ ಅನುಮತಿ ರದ್ಧ ಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

೧. ಅರ್ಜಿದಾರರ ಪ್ರಕಾರ ಕಲಂ ೪೯೪ ಇದು ಕೇವಲ ಹಿಂದೂ, ಬೌದ್ಧ, ಸಿಖ್ ಮತ್ತು ಕ್ರೈಸ್ತ ಧರ್ಮದವರಿಗೆ ಅನ್ವಯಿಸುತ್ತದೆ. ಇದರ ಪ್ರಕಾರ ಒಂದಕ್ಕಿಂತ ಹೆಚ್ಚಿನ ವಿವಾಹ ಮಾಡಿಕೊಂಡರೆ ಅದು ಒಪ್ಪಲು ಸಾಧ್ಯವಿಲ್ಲ. ಹಾಗೂ ಸಂಬಂಧ ಪಟ್ಟ ಪುರುಷನಿಗೆ ೭ ವರ್ಷದ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ವ್ಯವಸ್ಥೆ ಈ ಕಲಂ ನ ಅಡಿಯಲ್ಲಿದೆ. ಹಾಗೂ ‘ಮುಸ್ಲಿಂ ಪರ್ಸನಲ್ ಲಾ (ಶರಿಯತ) ಅರ್ಜ ಅಧಿನಿಯಮದ ೧೯೩೭’ ಮುಸಲ್ಮಾನರಿಗೆ ಇದರಿಂದ ಸಂರಕ್ಷಣೆ ನೀಡುತ್ತದೆ. ಆದ್ದರಿಂದ ಕಲಂ ೪೯೪ ಇದು ಭಾರತೀಯ ಜಾತ್ಯತೀತೆಗೆ ವಿರುದ್ಧವಾಗಿದ್ದು ಅದನ್ನು ರದ್ದುಪಡಿಸಬೇಕು. ಈ ಅಧಿನಿಯಮದ ಪ್ರಕಾರ ಮುಸಲ್ಮಾನ ಪುರುಷ 4 ವಿವಾಹ ಮಾಡಿಕೊಳ್ಳಬಹುದು.

೨. ಹಿಂದೂ ಪರ್ಸನಲ್ ಲಾ ಬೋರ್ಡ್, ಇದರಿಂದ ಶ್ರೀಮಂತ ಮುಸಲ್ಮಾನರು ಅನೇಕ ವಿವಾಹಗಳನ್ನು ಮಾಡಿಕೊಳ್ಳುತ್ತಿದ್ದಾರೆ ಹಾಗೂ ಬಡ ಮುಸಲ್ಮಾನರು ವಿವಿಧ ಲೈಂಗಿಕ ಅಪರಾಧಗಳನ್ನು ಮಾಡುತ್ತಿದ್ದಾರೆ. ಮುಸಲ್ಮಾನರಿಗೆ ಸಿಕ್ಕಿರುವ ಈ ವಿಶೇಷ ಅಧಿಕಾರದಿಂದ ಸಮಾಜದಲ್ಲಿ ಬಲಾತ್ಕಾರದ ಪ್ರಮಾಣ ಹೆಚ್ಚಿದೆ.

ಸಂಪಾದಕರ ನಿಲುವು

‘ಇದನ್ನು ನ್ಯಾಯಾಲಯ ಏಕೆ ಹೇಳಬೇಕಾಗುತ್ತದೆ ? ಇಷ್ಟೊತ್ತಿಗೆ ಸಮಾನ ನಾಗರೀಕ ಕಾನೂನು ಜಾರಿ ಮಾಡಿ ಈ ರೀತಿಯ ಘಟನೆ ನಿಲ್ಲಬೇಕಾಗಿತ್ತು’, ಎಂದು ರಾಷ್ಟ್ರ ನಿಷ್ಠ ಜನರಿಗೆ ಅನಿಸುತ್ತದೆ !