ದರ್ಭಂಗಾ (ಬಿಹಾರ) – ಬಿಹಾರ್ ನ ದರ್ಭಂಗಾ ನಗರದ ಮೌಲಾಗಂಜನಲ್ಲಿ `ಹಿಂದೂ ರಾಷ್ಟ್ರ’ ಎಂದು ಬರೆದಿರುವ ಧ್ವಜ ಹಾರಿಸಿರುವುದು ಬೆಳಕಿಗೆ ಬಂದಿದೆ. ಈ ಫಲಕ ಆಕ್ಷೇಪಾರ್ಹವಾಗಿದೆಯೆಂದು ಹೇಳುತ್ತಾ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಫಲಕದ ವಿಷಯದಲ್ಲಿ `ಆಲ್ ಇಂಡಿಯಾ ಮುಸ್ಲಿಂ ಬೇದಾರಿ ಕಾರವಾ’ ಹೆಸರಿನ ಸಂಘಟನೆಯು ಮಾರ್ಚ 22, 2023 ರಂದು ದರ್ಭಂಗಾ ಜಿಲ್ಲೆಯ ನ್ಯಾಯದಂಡಾಧಿಕಾರಿಗಳಲ್ಲಿ ಪತ್ರದ ಮೂಲಕ ದೂರು ದಾಖಲಿಸಿದ್ದರು. ತದನಂತರ ಈ ಕ್ರಮಕೈಗೊಳ್ಳಲಾಯಿತು. (ಮುಸಲ್ಮಾನರು ದೂರು ದಾಖಲಿಸಿದ ಬಳಿಕ ತತ್ಪರತೆಯಿಂದ ದೂರು ದಾಖಲಿಸಿಕೊಳ್ಳುವ ಪೊಲೀಸರು ಸಂತ್ರಸ್ತ ಹಿಂದೂಗಳು ಮುಸಲ್ಮಾನರ ವಿರುದ್ಧ ದೂರು ದಾಖಲಿಸಿದಾಗ ಸುಮ್ಮನಿರುತ್ತಾರೆ, ಎದನ್ನು ಗಮನಿಸಬೇಕು – ಸಂಪಾದಕರು)
‘Hindu Rashtra’ flags come up in Darbhanga, Bihar Police removes them and registers FIR after complaint by All India Muslim Bedari Karwanhttps://t.co/NMgj2hSNz6
— OpIndia.com (@OpIndia_com) March 25, 2023
ಪೊಲೀಸರು ನೀಡಿದ ಮಾಹಿತಿಯನುಸಾರ, ಮೌಲಾಗಂಜನಲ್ಲಿ ಕೆಲವು ಸಮಾಜಕಂಟಕರು ನವರಾತ್ರಿಯ ನಿಮಿತ್ತ ಆಕ್ಷೇಪಾರ್ಹ ಫಲಕವನ್ನು ಹಚ್ಚಿ ಸಾಮಾಜಿಕ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಕದಡಿಸಲು ಅಜ್ಞಾತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ `ಹಿಂದೂ ರಾಷ್ಟ್ರ’ದ ಧ್ವಜ ಹಾರಾಡಿಸಿ ಪರಿಸರದಲ್ಲಿ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸಲಾಗುತ್ತಿದೆಯೆಂದು ಈ ದೂರಿನಲ್ಲಿ ಹೇಳಲಾಗಿತ್ತು. (ಹಿಂದೂ ರಾಷ್ಟ್ರ ಹೆಸರು ಇರುವ ಫಲಕ ಹಚ್ಚುವುದರಿಂದ ಶಾಂತಿ ಹೇಗೆ ಭಂಗವಾಗುತ್ತದೆ ? ಮುಸಲ್ಮಾನರ ಹಿಂದೂದ್ವೇಷ ಇದರಿಂದ ಕಂಡು ಬರುತ್ತದೆ – ಸಂಪಾದಕರು)
ಸಂಪಾದಕೀಯ ನಿಲುವುಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಮತಾಂಧರಿಂದ `ಪಾಕಿಸ್ತಾನ ಜಿಂದಾಬಾದ್’ ಘೋಷಣೆ ನೀಡಲಾಗುತ್ತದೆ, ಹಾಗೆಯೇ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗುತ್ತದೆ. ಆ ಸಮಯದಲ್ಲಿ ಮುಸಲ್ಮಾನ ಸಂಘಟನೆಗಳು ಮಲಗಿರುತ್ತವೆಯೇ ? |