ಮದರಸಾಗಳನ್ನು ಆಧುನೀಕರಣಗೊಳಿಸಲು ವಿಶೇಷ ಅನುದಾನದ ಬೇಡಿಕೆಯ ಪ್ರಸ್ತಾವನೆಗೆ ರಾಜ್ಯಸಭೆಯಲ್ಲಿ ತಿರಸ್ಕಾರ !

ನವ ದೆಹಲಿ – ಹಿಂದುಳಿದ ಮುಸಲ್ಮಾನ ಸಮಾಜದ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಮದರಸಾಗಳನ್ನು ಆಧುನೀಕರಣಗೊಳಿಸುವಂತೆ ವಿಶೇಷ ಅನುದಾನದ ಬೇಡಿಕೆಯ ಪ್ರಸ್ತಾವನೆಯನ್ನು ರಾಜ್ಯಸಭೆ ತಿರಸ್ಕರಿಸಿತು. ಅಖಿಲ ಭಾರತೀಯ ಮುಸ್ಲಿಂ ಲೀಗ್ ಸದಸ್ಯ ಅಬ್ದುಲ ವಹಾಬ ಈ ಪ್ರಸ್ತಾವನೆಯನ್ನು ಮಂಡಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವ ಸ್ಮೃತಿ ಇರಾಣಿಯವರು ಸರ್ವಾನುಮತದಿಂದ ಈ ಪ್ರಸ್ತಾವನೆಯನ್ನು ರದ್ದುಗೊಳಿಸುವಂತೆ ವಿನಂತಿಸಿದ್ದರು. ತದನಂತರ ಧ್ವನಿ ಮತದಾನದಿಂದ ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು. ಸ್ಮೃತಿ ಇರಾಣಿಯವರು ಈ ಪ್ರಸ್ತಾವನೆಯ ವಿಷಯದ ಕುರಿತು ಮಾತನಾಡುತ್ತಾ, ಈ ಪ್ರಸ್ತಾವನೆ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಮಾಡುವ ಸಾಧ್ಯತೆ ಇತ್ತು ಹಾಗೂ ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿತ್ತು ಎಂದು ಹೇಳಿದರು.

ಸಂಪಾದಕೀಯ ನಿಲುವು

ಮದರಸಾಗಳಿಂದ ಉಗ್ರರಿಗೆ ಪ್ರೋತ್ಸಾಹ ನೀಡಲಾಗುತ್ತದೆ, ಮತಾಂಧತೆ ಮತ್ತು ಜಿಹಾದಿ ಮಾನಸಿಕತೆ ನಿರ್ಮಾಣವಾಗುತ್ತದೆ, ಅಶ್ಲೀಲ ಕೃತ್ಯಗಳು ನಡೆಯುತ್ತವೆ ಎಂದು ಇದುವರೆಗೆ ಕಂಡು ಬಂದಿರುವುದರಿಂದ ದೇಶದಲ್ಲಿರುವ ಮದರಸಾಗಳನ್ನು ಮುಚ್ಚುವ ಪ್ರಸ್ತಾವನೆಯನ್ನು ಸದನದಲ್ಲಿ ಹಾಜರು ಪಡಿಸಿ ಅದು ಬಹುಮತದಿಂದ ಸಮ್ಮತಿಸುವುದು ಆವಶ್ಯಕವಾಗಿದೆ !