ಬೆಂಗಳೂರು – ರಾಜ್ಯದ ಭಾಜಪ ಸರಕಾರ ಓ.ಬಿ.ಸಿ. ಮುಸಲ್ಮಾನರಿಗಾಗಿ ನೀಡುತ್ತಿದ್ದ ಶೇ. 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದೆ. ಹಾಗೆಯೇ ಈಗ ಈ ಮೀಸಲಾತಿಯನ್ನು ಒಕ್ಕಲಿಗರು ಮತ್ತು ಲಿಂಗಾಯತ ಈ ಎರಡು ಸಮುದಾಯಗಳಲ್ಲಿ ಹಂಚಲಾಗಿದೆ. ಇದರಿಂದ ಒಕ್ಕಲಿಗರ ಕೋಟಾದಡಿಯಲ್ಲಿ ಮೀಸಲಾತಿಯನ್ನು ಶೇ. 5 ರಿಂದ ಶೇ. 7 ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಪಂಚಮಸಾಲಿ, ವೀರಶೈವ ಮತ್ತು ಇತರೆ ಲಿಂಗಾಯತ ಪ್ರವರ್ಗದವರ ಕೋಟಾದಡಿಯಲ್ಲಿ ಮೀಸಲಾತಿಯನ್ನು ಶೇ. 5 ರಿಂದ ಶೇ. 7 ಕ್ಕೆ ಹೆಚ್ಚಿಸಲಾಗಿದೆ. ಈ ವಿಷಯದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾಹಿತಿ ನೀಡಿದರು.
ಯಾವ ಮುಸಲ್ಮಾನರಿಗೆ ಇಲ್ಲಿಯವರೆಗೆ ಓಬಿಸಿ ಮೀಸಲಾತಿ ಕೋಟಾದಡಿಯಲ್ಲಿ ಮೀಸಲಾತಿ ಸೌಲಭ್ಯ ದೊರಕುತ್ತಿತ್ತು, ಈಗ ಅವರನ್ನು ಆರ್ಥಿಕ ದೃಷ್ಟಿಯಿಂದ ದುರ್ಬಲರಾಗಿರುವ ಮೀಸಲು ವ್ಯಾಪ್ತಿಗೆ ವರ್ಗಾಯಿಸಲಾಗಿದೆ. ಶೇ. 10 ರಷ್ಟು ಆರ್ಥಿಕವಾಗಿ ಹಿಂದುಳಿದವರ ಮೀಸಲಾತಿ ಕೋಟಾದಡಿಯಲ್ಲಿ ಬ್ರಾಹ್ಮಣ, ವೈಶ್ಯ, ಮುದಲಿಯಾರ್, ಜೈನ ಮತ್ತು ಇತರ ಸಮುದಾಯದವರೊಂದಿಗೆ ಮುಸಲ್ಮಾನರು ಈಗ ಇರಬೇಕಾಗಿದೆ.
ಸಂಪಾದಕೀಯ ನಿಲುವುಒಂದು ವೇಳೆ ಇತರ ರಾಜ್ಯಗಳಲ್ಲಿ ಇಂತಹ ಮೀಸಲಾತಿ ನೀಡಲಾಗುತ್ತಿದ್ದರೆ, ಅದನ್ನು ಕೂಡ ರದ್ದು ಪಡಿಸುವುದು ಆವಶ್ಯಕ ! |