ಬಂಗಾಲದಲ್ಲಿ ಶ್ರೀ ಶೀತಲಾದೇವಿಯ ಜಾಗರಣೆಯ ಕಾರ್ಯಕ್ರಮದ ಮೇಲೆ ಮತಾಂಧರಿಂದ ದಾಳಿ

ಕೋಲಕಾತಾ – ಇಲ್ಲಿನ ಕಾಲೇಜ ಸ್ಟ್ರೀಟನಲ್ಲಿ ಆಯೋಜಿಸಲಾಗಿದ್ದ ಶ್ರೀ ಶೀತಲಾಮಾತೆಯ ಜಾಗರಣ ಕಾರ್ಯಕ್ರಮದ ಮೇಲೆ 200 ಮತಾಂಧರು ದಾಳಿ ನಡೆಸಿದರು. ಬಂಗಾಲದ ಭಾರತೀಯ ಜನತಾ ಪಕ್ಷದ ನಾಯಕ ಸುವೇಂದೂ ಅಧಿಕಾರಿಯವರು ಈ ಘಟನೆಯ ವಿಡಿಯೋ ಟ್ವೀಟ ಮಾಡಿದ್ದಾರೆ. ನಗರದ ವಾರ್ಡ ಸಂಖ್ಯೆ 38 ಮತ್ತು 40 ರಲ್ಲಿನ ಹಿಂದೂ ಸಮಾಜದವರು ಶ್ರೀ ಶೀತಲಾಮಾತೆಯ ಜಾಗರಣ ಕಾರ್ಯಕ್ರಮವನ್ನು ಆಯೋಜಿಸಿತ್ತು.

1. ಭಾಜಪದ ಸ್ಥಳೀಯ ಕಾರ್ಯಕರ್ತ ಮಾಹಿತಿ ನೀಡುವಾಗ, ಸಮೂಹವು ದೇವಿಯ ಜಾಗರಣೆ ಕಾರ್ಯಕ್ರಮದ ಸಮಯದಲ್ಲಿ ಭಜನೆ ಹಾಡುತ್ತಿದ್ದ ಗಾಯಕ ಮತ್ತು ಭಕ್ತರ ಮೇಲೆ ಹಲ್ಲೆ ನಡೆಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡರು.

2. ಈ ದಾಳಿಯನ್ನು ತೃಣಮೂಲ ಕಾಂಗ್ರೆಸ್ಸಿನ ಮತಾಂಧ ಕಾರ್ಯಕರ್ತನು ನಡೆಸಿದ್ದಾನೆಂದು ಹೇಳಲಾಗುತ್ತಿದೆ. ಇಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಪ್ರಕರಣದಲ್ಲಿ ಅಮಹರ್ಸ್ಟ ಸ್ಟ್ರೀಟ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ; ಆದರೆ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

3. ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ಮತಾಂಧರು ದಾಳಿ ನಡೆಸುವುದು ಇದೇ ಮೊದಲ ಬಾರಿ ಏನೂ ಅಲ್ಲ. ಹಿಂದಿನ ವರ್ಷ ಅಂದರೆ ಎಪ್ರಿಲ 10, 2022 ರಲ್ಲಿ ಹಾವಡಾದಲ್ಲಿ ಶ್ರೀ ರಾಮನವಮಿಯ ಸಮಯದಲ್ಲಿ ಏರ್ಪಡಿಸಲಾಗಿದ್ದ ಮೆರವಣಿಗೆಯ ಮೇಲೆಯೂ ಮತಾಂಧರು ದಾಳಿ ನಡೆಸಿದ್ದರು. ಹಾಗೆಯೇ ಅನೇಕ ಸ್ಥಳಗಳಲ್ಲಿ ದುರ್ಗಾಪೂಜೆಯ ನಿಮಿತ್ತ ನಿರ್ಮಿಸಿದ್ದ ಮಂಟಪದ ಮೇಲೆಯೂ ದಾಳಿ ನಡೆಸಿದ್ದರು.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ನ ರಾಜ್ಯದಲ್ಲಿ ಬಂಗಾಲದ ಸ್ಥಿತಿ ಬಾಂಗ್ಲಾ ದೇಶದಂತೆ ಆಗಿದ್ದರಿಂದ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಆವಶ್ಯಕತೆಯಿದೆ !