|
ಬಲಿಯಾ (ಉತ್ತರಪ್ರದೇಶ) – ಉತ್ತರಪ್ರದೇಶದ ಉಗ್ರ ನಿಗ್ರಹ ದಳವು ಇಲ್ಲಿ ದಾಳಿ ನಡೆಸಿ ಅಬೂ ತಲ್ಹಾ ಉರ್ಫ ಮಹಮ್ಮದ ಅರಮಾನ ಮತ್ತು ಅಬ್ದುಲ ಅಮೀನ ಹೆಸರಿನ 2 ರೋಹಿಂಗ್ಯಾಗಳನ್ನು ಬಂಧಿಸಿದ್ದಾರೆ. ಇವರಿಂದ ಬಳಿ 3 ಭಾರತೀಯ ಪಾಸ್ ಪೋರ್ಟ್ ಮತ್ತು ಇತರ ಗುರುತು ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಗೆ ಇಜಹಾರೂಲ ಹಕ್ ಹೆಸರಿನ ಸ್ಥಳೀಯ ನಾಗರಿಕನು ಸಹಾಯ ಮಾಡಿದ್ದನು. ಅವನನ್ನು ಈ ಮೊದಲೇ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇತರೆ 4 ಜನರು ಪರಾರಿಯಾಗಿದ್ದು, ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ.
UP ATS arrests two Myanmar Rohingyas from Ballia https://t.co/LpiSXiP4Av
— TOI Varanasi (@TOI_Varanasi) March 16, 2023
ಅರಮಾನ ಭಾರತೀಯ ಪಾಸಪೋರ್ಟ ಉಪಯೋಗಿಸಿ ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ಬಂದಿದ್ದನು. ಅವನು ಬಂಗಾಲದ ಹೂಗ್ಲಿಯಲ್ಲಿ ಭೂಮಿಯನ್ನು ಖರೀದಿಸಿ ಮನೆಯನ್ನು ಕೂಡ ಕಟ್ಟಿದ್ದಾನೆ. ಭೂಮಿಯನ್ನು ನೊಂದಣಿ ಮಾಡಿಕೊಳ್ಳುವಾಗ ಅವನು ಭಾರತೀಯ ಗುರುತು ಪತ್ರವನ್ನು ನೀಡಿದ್ದನು. ಬಳಿಕ ಅವನು ಆಧಾರಕಾರ್ಡ ಮಾಡಿಸಿಕೊಳ್ಳುವಾಗ ಬಂಗಾಲದ ಸ್ಥಳೀಯ ಶಾಸಕರ ಸಹಾಯದಿಂದ ಉತ್ತರಪ್ರದೇಶದ ಬದಲು ಹೂಗ್ಲಿಯ ವಿಳಾಸವನ್ನು ನೀಡಿದ್ದನು. ಅರಮಾನನಿಂದ ಮತದಾನ ಗುರುತುಪತ್ರ ಮತ್ತು ಪ್ಯಾನಕಾರ್ಡ ಕೂಡ ದೊರಕಿದೆ. ಆತ 2008 ರಲ್ಲಿ ಭಾರತದಲ್ಲಿ ನುಸುಳಿದ್ದನು. ಅವನಿಗೆ ಬಲಿಯಾದಲ್ಲಿ ಸಗೀರ ಅಹಮ್ಮದ ತನ್ನ ಅಂಗಡಿಯಲ್ಲಿ ನೌಕರಿಗೆ ಇಟ್ಟುಕೊಂಡಿದ್ದನು. ಅವನಿಗೆ ಅರಮಾನ ರೋಹಿಂಗ್ಯಾ ಆಗಿದ್ದಾನೆ ಎಂದು ತಿಳಿದಿತ್ತು.
ಸಂಪಾದಕೀಯ ನಿಲುವುದೇಶದಲ್ಲಿ ನುಸುಳಿ ಭಾರತೀಯ ನಾಗರಿಕತ್ವವನ್ನು ಪಡೆದುಕೊಳ್ಳುವವರೆಗೆ ರೋಹಿಂಗ್ಯಾಗಳು ತಲುಪುತ್ತಾರೆ. ಇದಕ್ಕಾಗಿ ಅವರಿಗೆ ಅವರ ದೇಶದ್ರೋಹಿ ಧರ್ಮಬಂಧುಗಳು ಸಹಾಯ ಮಾಡುತ್ತಾರೆ, ಇದನ್ನು ಪೊಲೀಸರು, ಸರಕಾರ ಮತ್ತು ನಿಧರ್ಮಿ ರಾಜಕೀಯ ಪಕ್ಷಗಳು ಯಾವಾಗ ಗಂಭೀರತೆಯಿಂದ ನೋಡುವರು ? |