ಪ್ರಭು ಶ್ರೀರಾಮ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ಸೇರಿದವರು !'(ಅಂತೆ) – ಫಾರೂಕ್ ಅಬ್ದುಲ್ಲಾ

ಫಾರೂಕ್ ಅಬ್ದುಲ್ಲಾ

ಶ್ರೀನಗರ – ಭಾಜಪ ಅಧಿಕಾರದಲ್ಲಿ ಉಳಿಯಲು ಶ್ರೀರಾಮನ ಹೆಸರನ್ನು ಬಳಸಿತು; ಆದರೆ ಭಗವಾನ್ ಶ್ರೀರಾಮ ಹಿಂದೂಗಳಿಗೆ ಮಾತ್ರವಲ್ಲ, ಮುಸಲ್ಮಾನರು, ಸಿಖ್ಖರು ಅಥವಾ ಇತರ ಸಮುದಾಯಗಳಿಗೆ ಸೇರಿದವರು, ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಪ್ಯಾಂಥರ್ಸ್ ಪಕ್ಷದ ಸಂಸ್ಥಾಪನಾ ದಿನದ ನಿಮಿತ್ತ ಉಧಂಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅಬ್ದುಲ್ಲಾ ತಮ್ಮ ಮಾತನ್ನು ಮುಂದುವರೆಸಿ, “ಶ್ರೀರಾಮನು ಹಿಂದೂಗಳಿಗೆ ಮಾತ್ರ” ಎಂದು ಯಾರಾದರೂ ಅಂದುಕೊಂಡರೆ ಅದನ್ನು ತೆಗೆದುಹಾಕಬೇಕು ಹಾಗೆಯೇ ಅಲ್ಲಾ ಮುಸ್ಲಿಮರಿಗೆ ಮಾತ್ರವಲ್ಲ, ಎಲ್ಲರಿಗಾಗಿಯೂ ಇದ್ದಾನೆ.” ಎಂದು ಹೇಳಿದರು.

ಸಂಪಾದಕರ ನಿಲುವು

* ಆರ್ಟಿಕಲ್ 370 ತೆಗೆದ ನಂತರ, ಕಾಶ್ಮೀರದಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂ ದ್ವೇಷಿ ಫಾರೂಕ್ ಅಬ್ದುಲ್ಲಾ ಶ್ರೀರಾಮನನ್ನು ನೆನಪಿಸಿಕೊಂಡರು ಮತ್ತು ಹಿಂದೂ ದ್ವೇಷಿ ಮೆಹಬೂಬಾ ಮುಫ್ತಿಯು ಭಗವಾನ್ ಶಿವನನ್ನು ನೆನಪಿಸಿಕೊಂಡರು ಎಂಬುದನ್ನು ಗಮನಿಸಿ !

* ಈ ನಾಯಕರ ಆಳ್ವಿಕೆಯಲ್ಲಿಯೇ ಕಾಶ್ಮೀರದಲ್ಲಿ ಅತಿ ಹೆಚ್ಚು ಹಿಂದೂಗಳ ಮಾರಣಹೋಮ ನಡೆದಾಗ ಇವರು ಕೇವಲ ವೀಕ್ಷಕ ಭೂಮಿಕೆಯಲ್ಲಿದ್ದರು ಹಾಗೂ ಜಿಹಾದಿ ಭಯೋತ್ಪಾದನೆಗೆ ಆಶ್ರಯ ನೀಡಿದ್ದನ್ನು ಹಿಂದೂಗಳು ಎಂದಿಗೂ ಮರೆಯಬಾರದು !