ಭಯೋತ್ಪಾದಕರಿಗೆ ಹಣಕಾಸು ಪೂರೈಸುವ ಪ್ರಕರಣದಲ್ಲಿ ಕಾಶ್ಮೀರದಲ್ಲಿ ಮುಸಲ್ಮಾನ ಪತ್ರಕರ್ತನ ಬಂಧನ

ಇರ್ಫಾನ ಮೆಹರಾಜ

ಶ್ರೀನಗರ (ಜಮ್ಮೂ-ಕಾಶ್ಮೀರ) – ಭಯೋತ್ಪಾದಕರಿಗೆ ಹಣಕಾಸು ಪೂರೈಸಿರುವ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳವು ಶ್ರೀನಗರದಿಂದ ಇರ್ಫಾನ ಮೆಹರಾಜ ಎಂಬ ಪತ್ರಕರ್ತನನ್ನು ಬಂಧಿಸಿದೆ. ಒಂದು ಸರಕಾರೇತರ ಸಂಸ್ಥೆಯಿಂದ ಶಿಕ್ಷಣ ಮತ್ತು ಆರೋಗ್ಯದ ಕಾರ್ಯಗಳಿಗೆ ಹಣವನ್ನು ಸಂಗ್ರಹಿಸಿ, ಅದನ್ನು ಭಯೋತ್ಪಾದಕರ ಕೃತ್ಯಗಳಿಗೆ ಉಪಯೋಗಿಸುವ ಗುಂಪಿನೊಂದಿಗೆ ಇರ್ಫಾನನಿಗೆ ಸಂಬಂಧವಿದೆ. ಅವನನ್ನು ಮುಂದಿನ ವಿಚಾರಣೆಗಾಗಿ ದೆಹಲಿಗೆ ಕಳುಹಿಸಲಾಗಿದೆ. ಭಯೋತ್ಪಾದಕರಿಗಾಗಿ ಹಣವನ್ನು ಸಂಗ್ರಹಿಸುವ ಈ ಸಂಸ್ಥೆಯು ಲಷ್ಕರ-ಎ-ತೋಯಬಾ ಮತ್ತು ಹಿಜಬುಲ್ ಮುಜಾಹಿದೀನಗಳಂತಹ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದೆಯೆಂದು ಹೇಳಲಾಗುತ್ತಿದೆ.