ಜ್ಞಾನವಾಪಿಯಲ್ಲಿನ ಶಿವಲಿಂಗದ ವಯಸ್ಸನ್ನು ಪರಿಶೀಲಿಸಿವ ಬಗ್ಗೆ ತಕ್ಷಣವೇ ಪ್ರಮಾಣಪತ್ರ ಸಲ್ಲಿಸಿ !

ಭಾರತೀಯ ಪುರಾತತ್ವ ಇಲಾಖೆಗೆ ಅಲಹಾಬಾದ್ ಹೈಕೋರ್ಟ್ ಆದೇಶ

ಪ್ರಯಾಗರಾಜ್ (ಉತ್ತರ ಪ್ರದೇಶ) – ಇಲ್ಲಿನ ಕಾಶಿ ವಿಶ್ವೇಶ್ವರ ದೇವಸ್ಥಾನದ ಹತ್ತಿರದಲ್ಲಿರುವ ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ವಯಸ್ಸನ್ನು ಪರಿಶೀಲಿಸಲು ಪ್ರಮಾಣಪತ್ರವನ್ನು ತಕ್ಷಣವೇ ಸಲ್ಲಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಈ ಬಗ್ಗೆ ಮುಂದಿನ ವಿಚಾರಣೆ ಏಪ್ರಿಲ್ ೫ ರಂದು ನಡೆಯಲಿದೆ. ಈ ಸಮಯದಲ್ಲಿ ನ್ಯಾಯಾಲಯವು ಭಾರತೀಯ ಪುರಾತತ್ವ ಇಲಾಖೆಯಿಂದ ಹೆಚ್ಚಿನ ಸಮಯ ಕೇಳಬಾರದು ಎಂದು ಹೇಳಿದೆ.