ಪರಿಶಿಷ್ಟ ಜಾತಿಯ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದರಿಂದ ಸಿಪಿಐ(ಎಂ) ಶಾಸಕನ ಶಾಸಕ ಸ್ಥಾನ ರದ್ದು !

ಕೇರಳ ಉಚ್ಚ ನ್ಯಾಯಾಲಯದ ನಿರ್ಣಯ

ಕೊಚ್ಚಿ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ಶಾಸಕ ಎ. ರಾಜಾ ಇವರ ಜಾತಿ ಪ್ರಮಾಣಪತ್ರ ನಕಲಿ ಇದೆಯೆಂದು ತಿಳಿಸುತ್ತಾ, ಅವರ ಸದನದ ಸದಸ್ಯತ್ವ ರದ್ದುಗೊಳಿಸಲಾಗಿದೆಯೆಂದು ಘೋಷಿಸಿದರು. ವಿಚಾರಣೆಯಿಂದ ಅವರು ಪರಿಶಿಷ್ಟ ಜಾತಿಯವರಲ್ಲ ಎಂದು ಸ್ಪಷ್ಟವಾಗಿದೆ. ಅವರು ಪರಿಶಿಷ್ಟ ಜಾತಿಯ ಮೀಸಲಾಗಿರುವ ಇಡುಕ್ಕಿ ಜಿಲ್ಲೆಯ ದೇವಿಕುಲಮ್ ವಿಧಾನಸಭಾ ಮತದಾನ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಡಿ. ಕುಮಾರ ಇವರು ಅರ್ಜಿ ದಾಖಲಿಸಿದ್ದರು. ಡಿ. ಕುಮಾರ ಇವರು 7 ಸಾವಿರದ 848 ಮತಗಳಿಂದ ಸೋತಿದ್ದರು. ಡಿ. ಕುಮಾರ ಇವರು, ಎ. ರಾಜಾ ಮತಾಂತರಗೊಂಡ ಕ್ರೈಸ್ತರಾಗಿದ್ದಾರೆ. ಅವರು ಪರಿಶಿಷ್ಟ ಜಾತಿಯ ನಕಲಿ ಪ್ರಮಾಣಪತ್ರ ಹಾಜರು ಪಡಿಸಿದ್ದಾರೆ ಎಂದು ಆರೋಪಿಸಿದ್ದರು.

ಸಂಪಾದಕೀಯ ನಿಲುವು

ಈ ರೀತಿ ಮೋಸಗೊಳಿಸುವವರನ್ನು ಜೈಲಿಗಟ್ಟುವುದು ಆವಶ್ಯಕವಿದೆ !