‘ಓಟಿಟಿ’ ವೇದಿಕೆಯಲ್ಲಿ ಹೆಚ್ಚುತ್ತಿರುವ ಬೈಗುಳ ಮತ್ತು ಅಶ್ಲೀಲತೆ ಸಹಿಸಲಾಗದು !

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಇವರ ಎಚ್ಚರಿಕೆ !

ಅನುರಾಗ ಠಾಕೂರ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ

ನಾಗಪುರ – ‘ಓಟಿಟಿ’ ವೇದಿಕೆಯಿಂದ ನಿರ್ಮಾಣದ ಹೆಸರಿನಲ್ಲಿ ನಡೆಯುವ ಬೈಗುಳ ಮತ್ತು ಅಶ್ಲೀಲತೆ ಸಹಿಸಲಾಗುವುದಿಲ್ಲ, ಎಂದು ಕೇಂದ್ರ ಮಾಹಿತಿ ಪ್ರಸಾರ ಸಚಿವ ಅನುರಾಗ ಠಾಕೂರ್ ಇವರು ಎಚ್ಚರಿಕೆ ನೀಡಿದ್ದಾರೆ. ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಅನುರಾಗ ಠಾಕುರ್ ಮಾತು ಮುಂದುವರೆಸಿ, ಇದರ ಸಂದರ್ಭದಲ್ಲಿನ ಹೆಚ್ಚುತ್ತಿರುವ ದೂರುಗಳ ಬಗ್ಗೆ ಸರಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಇದರ ಬಗ್ಗೆ ಕಾನೂನಿನಲ್ಲಿ ಬದಲಾವಣೆ ಮಾಡಬೇಕಾದರೆ, ಆಗ ಸರಕಾರ ಇದರ ಬಗ್ಗೆ ಯೋಚಿಸಲು ಸಿದ್ಧವಿದೆ. ಈ ವೇದಿಕೆಗೆ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ನೀಡಿದೆ, ಅಶ್ಲೀಲತೆಗಾಗಿ ಅಲ್ಲ ಎಂದು ಹೇಳಿದರು.

(ಸೌಜನ್ಯ – Aaj Tak)

ಓಟಿಟಿ ಎಂದರೆ ಏನು ?

‘ಓಟಿಟಿ’ ಎಂದರೆ ‘ಓವರ ದ ಟಾಪ್.’ ಕಂಪನಿಯು ನೇರ ಇಂಟರ್ನೆಟ್ ಮೂಲಕ ವೀಕ್ಷಕರಿಗಾಗಿ ನೀಡಿರುವ ಸೇವೆ ಎಂದರೆ ‘ಓಟಿಟಿ’ ಹೀಗೆ ಹೇಳಬಹುದು. ಓಟಿಟಿಯ ಮೂಲಕ ವೀಕ್ಷಕರು ಚಲನಚಿತ್ರ, ‘ವೆಬ್ ಸರಣಿ’ ಮುಂತಾದ ಮನೋರಂಜನಾತ್ಮಕ ಕಾರ್ಯಕ್ರಮ ನೋಡಬಹುದು.

ಸಂಪಾದಕರ ನಿಲುವು

‘ಓಟಿಟಿ’ಗಾಗಿ ‘ಸೆನ್ಸಾರ್ ಬೋರ್ಡ್’ ಅವಶ್ಯಕವಾಗಿದೆ, ಆಗಲೇ ಈ ಘಟನೆಗಳು ತಡೆಯಬಹುದು. ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು !