ಪಂಜಾಬನಲ್ಲಿ ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಗದಂತೆ ಸರಕಾರ ತಡೆಯಬೇಕು ! – ಶ್ರೀ ಅಕಾಲ ತಖ್ತ ಸಾಹೇಬ ಜತ್ಥೆದಾರ (ಪ್ರಮುಖ) ಜ್ಞಾನಿ ಹರಪ್ರಿತ ಸಿಂಗ್ ಇವರ ಮನವಿ

ಶ್ರೀ ಅಕಾಲ ತಖ್ತ ಸಾಹೇಬ ಜತ್ಥೆದಾರ (ಪ್ರಮುಖ) ಜ್ಞಾನಿ ಹರಪ್ರಿತ ಸಿಂಗ್

ಅಮೃತಸಾರ (ಪಂಜಾಬ) – ರಾಜಕೀಯ ಹಿತಾಸಕ್ತಿಗಾಗಿ ಪಂಜಾಬನಲ್ಲಿ ಭಯೋತ್ಪಾದನೆಯ ವಾತಾವರಣ ನಿರ್ಮಾಣವಾಗದಂತೆ ಸರಕಾರ ತಡೆಯಬೇಕಾಗಿದೆ. ಸರಕಾರವು ಪ್ರಜಾಪ್ರಭುತ್ವದಲ್ಲಿ ವಾಸಿಸುವ ಮತ್ತು ತಮ್ಮ ಅಭಿಪ್ರಾಯವನ್ನು ಪ್ರತಿಪಾದಿಸುವವರಿಗೆ ಅಕ್ರಮವಾಗಿ ವಶಕ್ಕೆ ಪಡೆಯುವವರನ್ನು ತಡೆಯಬೇಕು; ಎಕೆಂದರೆ ಪಂಜಾಬ ಈ ಹಿಂದೆ ತುಂಬಾ ಅನುಭವಿಸಿದೆ, ಹೀಗೆ ಶ್ರೀ. ಅಕಾಲ ತಖ್ತ ಸಾಹೇಬ ಜತ್ಥೆದಾರ (ಪ್ರಮುಖ) ಜ್ಞಾನಿ ಹರಪ್ರಿತ ಸಿಂಗ್ ಅವರು ಮನವಿ ಮಾಡಿದ್ದಾರೆ. ‘ಉತ್ತಮ ಭವಿಷ್ಯದ ಕಡೆ ಹೋಗುವ ಸಮಯ ಇದಾಗಿದೆ. ಪಂಜಾಬ್ ನಲ್ಲಿ ಹಿಂದಿನ ಸರಕಾರದ ಅತ್ಯಾಚಾರದ ಗಾಯಗಳು ಗುಣಪಡಿಸಲು ಯಾವದೇ ಸರಕಾರವು ಗಂಭೀರವಾಗಿ ನೋಡಿಲ್ಲ’, ಎಂದು ಆರೋಪಿಸಿದ್ದಾರೆ.

ಜ್ಞಾನಿ ಹರಪ್ರಿತ ಸಿಂಗ್ ಮಾತನ್ನು ಮುಂದುವರೆಸುತ್ತಾ,

1. ಹಿಂದಿನ ಸರಕಾರ ಮಾಡಿರುವ ತಾರತಮ್ಯ ಮತ್ತು ದೌರ್ಜನ್ಯಗಳು ಸಿಖ್ ಯುವಕರ ಮನಸ್ಥಿತಿಯ ಮೇಲೆ ಪರಿಣಾಮ ಬೀರಿದೆ ಮತ್ತು ಅವರಲ್ಲಿ ಅಸಮಾಧಾನವಿದೆ, ಇದನ್ನು ನಿರ್ಲಕ್ಷಿಸಲಾಗುವುದಿಲ್ಲ. ಅಂತಹ ಯುವಕರನ್ನು ದಿಕ್ಕಿಲ್ಲದಂತೆ ಮಾಡಿ ಅವರ ಭಾವನೆಗಳ ಜೊತೆ ಆಟವಾಡಲಾಗುತ್ತಿದೆ. ಸಿಖ್ ಯುವಕರು ಹೋರಾಟದ ಹಾದಿಯನ್ನು ಹಿಡಿಯುವ ಬದಲು, ವಿಚಾರವಂತರ ಮೇಲೆ ವಿಶ್ವಾಸವಿಡಬೇಕು. ಸಿಖ್ ಯುವಕರನ್ನು ಹಿಂಸಿಸಲು ಸರಕಾರಕ್ಕೆ ಅವಕಾಶ ಸಿಗುವಂತಹ ಯಾವುದೇ ಆಮಿಷದಿಂದ ಯುವಕರು ತಮ್ಮನ್ನು ತಾವು ತಡೆಯಬೇಕಾಗಿದೆ.

2. ಸಿಖ್ಖರಲ್ಲಿ ವಿಭಜನೆಯ ಭಾವನೆ ನಿರ್ಮಾಣ ಮಾಡಿದ ಹಿಂದ ರಾಜಕೀಯ ತಾರತಮ್ಯದ ದೊಡ್ಡ ಪಾತ್ರವಿದೆ; ಹಿಂದಿನ ಸರಕಾರದಿಂದ ಆಗಿರುವ ತಪ್ಪುಗಳಿಂದ ಸಿಖ್ಖರು ಕಲಿತು ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಸೂತ್ರಗಳನ್ನು ಸುಲಭಗೊಳಿಸಬೇಕು, ಮತ್ತು ವಿಭಜನೆಯ ಭಾವನೆವನ್ನು ನಾಶಪಡಿಸಬೇಕು, ಎಂದು ನಾವು ಇಂದು ಮನವಿ ಮಾಡುತ್ತೇವೆ. ಅಧಿಕಾರಕ್ಕಾಗಿ ಅಲ್ಪಸಂಖ್ಯಾತ ಯುವಕರ ಮನದಲ್ಲಿ ಒಡಕು ಮೂಡಿಸುವ ಭಾವನೆಯನ್ನು ಸರಕಾರವು ನಿಲ್ಲಿಸಬೇಕಾಗಿದೆ ಎಂದು ಹೇಳಿದರು.