ಅಮೃತಪಾಲ ಬಂಧನದಲ್ಲಿಲ್ಲ, ಪರಾರಿಯಾಗಿದ್ದಾನೆ !

ತೀವ್ರಗಾಮಿ ಸಿಖ್ ಬೋಧಕ ಅಮೃತಪಾಲ್ ಸಿಂಗ್

ಚಂಡಿಗಡ – ಖಲಿಸ್ತಾನಿ ಸಂಘಟನೆಯಾದ ‘ವಾರಿಸ ಪಂಜಾಬ ದೆ’ಯ (‘ಪಂಜಾಬಿನ ವಾರಸುದಾರ) ಪ್ರಮುಖನಾದ ಅಮೃತಪಾಲ ಸಿಂಹನನ್ನು ಪಂಜಾಬ ಪೊಲೀಸರು ಜಲಂಧರನಲ್ಲಿರುವ ನಕೊದರಾ ಭಾಗದಲ್ಲಿ ಬೆಂಬತ್ತಿ ಬಂಧಿಸಿರುವ ವಾರ್ತೆಯು ಮಾರ್ಚ ೧೮ರಂದು ಎಲ್ಲ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದಕ್ಕೆ ಪೊಲೀಸರು ಅನುಮೋದನೆ ನೀಡಿರಲಿಲ್ಲ ಹಾಗೆಯೇ ನಿರಾಕರಿಸಿಯೂ ಇರಲಿಲ್ಲ. ಆದರೆ ‘ಅಮೃತಪಾಲನನ್ನು ಇಂದಿಗೂ ಬಂಧಿಸಲಾಗಿಲ್ಲ. ಅವನು ಪರಾರಿಯಾಗಿದ್ದು ಪೊಲೀಸರು ಅವನ ಹುಡುಕಾಟದಲ್ಲಿದ್ದಾರೆ, ಎಂದು ಹೇಳಲಾಗುತ್ತಿದೆ. ಆದರೂ ಈ ಬಗ್ಗೆಯೂ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ. ಇದರಿಂದಾಗಿ ಸಂಶಯಾತ್ಮಕ ಸ್ಥಿತಿ ನಿರ್ಮಾಣವಾಗಿದೆ. ಪಂಜಾಬ ಪೊಲೀಸರು ಇಲ್ಲಿಯ ವರೆಗೆ ಅಮೃತಪಾಲನ ೭೮ ಸಹಚರರನ್ನು ಬಂಧಿಸಿದ್ದಾರೆ. ಅದರೊಂದಿಗೆ ರಾಜ್ಯದಲ್ಲಿನ ಇಂಟರನೆಟ್‌ ಸೇವೆ ಸ್ಥಗಿತಗೊಳಿಸುವುದರೊಂದಿಗೆ ಅನೇಕ ಭಾಗಗಳಲ್ಲಿ ಕರ್ಫ್ಯೂ ಜ್ಯಾರಿ ಮಾಡಲಾಗಿದೆ. ಪಂಜಾಬ ಪೊಲೀಸರು ‘ಅಮೃತಪಾಲನು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ’ ಎಂದು ಹೇಳಿದ್ದಾರೆ. ಅಮೃತಪಾಲನ ತಂದೆ ತರಸೆಮ ಸಿಂಹರು ‘ನನಗೆ ನನ್ನ ಮಗ ಎಲ್ಲಿ ಇದ್ದಾನೆ ಎಂಬುದೇ ತಿಳಿದಿಲ್ಲ’ ಎಂದು ಹೇಳಿದ್ದಾರೆ. ಪೊಲೀಸರು ಹರಿಯಾಣಾದಲ್ಲಿನ ಗುರುಗ್ರಾಮದಲ್ಲಿ ಅಮೃತಪಾಲನಿಗೆ ಆರ್ಥಿಕ ನರೆವು ನೀಡುತ್ತಿದ್ದ ದಲಜಿತ ಸಿಂಹ ಕಲಸೀಯನ್ನು ಬಂಧಿಸಿದ್ದಾರೆ.