ಮಹೇಂದ್ರಗಡದಲ್ಲಿ 2 ಗಂಟೆ ಗೋವು ಕಳ್ಳಸಾಗಾಟಗಾರರ ಹಿಂಬಾಲಿಸಿದ ಗೋಪ್ರೇಮಿ !

ಗೋವು ಕಳ್ಳಸಾಗಾಟಗಾರರ ಗೋ ಪ್ರೇಮಿಗಳ ಮೇಲೆ ಗುಂಡಿನ ದಾಳಿ !

ಗೋವು ಪ್ರೇಮಿಗಳ ವಾಹನದ ಮೇಲಾದ ದಾಳಿ

ಮಹೇಂದ್ರಗಡ (ಹರಿಯಾಣಾ) – ಇಲ್ಲಿ ಗೋವು ಪ್ರೇಮಿಗಳ ವಾಹನದ ಮೂಲಕ 2 ಗಂಟೆಗಳಲ್ಲಿ 60 ಕಿಲೋಮೀಟರ ವರೆಗೆ ಗೋವು ಕಳ್ಳ ಸಾಗಾಟಗಾರರನ್ನು ಬೆನ್ನತ್ತಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಸಮಯದಲ್ಲಿ ಗೋವು ಕಳ್ಳಸಾಗಾಟಗಾರರು `ಪಿಕಅಪ್’ ವಾಹನದಲ್ಲಿ ತುಂಬಿ ಕಟ್ಟಿ ಹಾಕಿದ್ದ ಗೋವುಗಳನ್ನು ಒಂದೊಂದಾಗಿ ಅವರನ್ನು ಬೆನ್ನತ್ತಿದ್ದ ಗೋವು ಪ್ರೇಮಿಗಳ ವಾಹನಗಳ ಎದುರಿಗೆ ಎಸೆದರು. ಹಾಗೂ ಗೋವು ಕಳ್ಳ ಸಾಗಾಟಗಾರರು ಗೋವು ಪ್ರೇಮಿಗಳ ಮೇಲೆ ಗುಂಡು ಹಾರಿಸಿದರು. ಇದರಿಂದ ಗೋವು ಪ್ರೇಮಿಗಳ ವಾಹನಗಳಿಗೆ ತುಂಬ ಹಾನಿಯಾಯಿತು.

ಈ ವಿಷಯದ ಕುರಿತು ಸಿಕ್ಕಿರುವ ಮಾಹಿತಿಯನುಸಾರ, ಮಹೇಂದ್ರಗಡದ ಸುರಜನವಾಸ ಕಾಲುವೆಯ ಹತ್ತಿ ಕೆಲವು ಜನರು ಪಿಕಪ್ ವಾಹನದ ಹತ್ತಿರ ಅನುಮಾನಸ್ಪದ ಸ್ಥಿತಿಯಲ್ಲಿ ನಿಂತಿರುವುದು ಕಂಡು ಬಂದಿತು. ಗ್ರಾಮದ ಕೆಲವು ಜನರು ಅವರಲ್ಲಿ ವಿಚಾರಿಸಿದಾಗ ಅವರು ಹಾರಿಕೆಯ ಉತ್ತರ ನೀಡಿದರು. ಗ್ರಾಮಸ್ಥರಿಗೆ ವಾಹನದಲ್ಲಿ 8 ರಿಂದ 10 ಗೋವುಗಳನ್ನು ಹಗ್ಗದಿಂದ ಕಟ್ಟಿಹಾಕಿರುವುದು ಕಂಡು ಬಂದಿತು. ಗೋವು ಕಳ್ಳಸಾಗಾಣಿಕೆಯ ಈ ವಿಷಯ ಅಕ್ಕಪಕ್ಕದ ಪರಿಸರದಲ್ಲಿ ಹರಡಿತು. ತದನಂತರ 4 ವಾಹನದಲ್ಲಿ ಗೋವು ಕಳ್ಳಸಾಗಾಟಗಾರರ ಹಿಂಬಾಲಿಸಲಾಯಿತು. ಗೋವು ಪ್ರೇಮಿಗಳು ಅನೇಕ ಸಲ 100 ಮತ್ತು 112 ಸಂಖ್ಯೆಗೆ ಕರೆ ಮಾಡಿದರೂ ಅವರಿಗೆ ಸಹಕಾರ ಸಿಗಲಿಲ್ಲ.

 ಸಂಪಾದಕೀಯ ನಿಲುವು

ಗೋವು ಕಳ್ಳಸಾಗಾಟಗಾರರನ್ನು ತಡೆಯುವ ಕೆಲಸ ಪೊಲೀಸರು ಮಾಡಬೇಕಾಗುತ್ತದೆ, ಆದರೆ ಗೋ ಪ್ರೇಮಿಗಳು ತಮ್ಮ ಸ್ವಂತ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಮಾಡಬೇಕಾಗುತ್ತಿದೆ, ಇದು ಪೊಲೀಸರು ಮತ್ತು ಸರಕಾರಕ್ಕೆ ನಾಚಿಕೆಗೇಡು !