ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ (ಬಲಬದಿಗೆ)

ನವ ದೆಹಲಿ – ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಇಂದಿಗೂ ಸೂಕ್ಷ್ಮವಾಗಿದೆ; ಏಕೆಂದರೆ ನಮ್ಮ ಸೈನಿಕರು ನಿಯೋಜಿಸಲ್ಪಟ್ಟಿರುವ ಸ್ಥಳ ಅತ್ಯಂತ ಅಪಾಯಕಾರಿಯಾಗಿದೆ. ಎಲ್ಲಿಯವರೆಗೆ ಸಪ್ಟೆಂಬರ 2020 ರಲ್ಲಿ ಚೀನಾ ವಿದೇಶಾಂಗ ಸಚಿವರೊಂದಿಗೆ ನಡೆದ ಸೈದ್ಧಾಂತಿಕ ಒಪ್ಪಂದಕ್ಕೆ ಅನುಗುಣವಾಗಿ ಗಡಿವಿವಾದದ ಮೇಲೆ ಉಪಾಯ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲವೋ, ಅಲ್ಲಿಯವರೆಗೆ ಎರಡೂ ದೇಶಗಳ ಸಂಬಂಧ ಸಾಮಾನ್ಯವಾಗುವುದಿಲ್ಲ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಇಲ್ಲಿ ಆಯೋಜಿಸಲಾಗಿರುವ `ಇಂಡಿಯಾ ಟುಡೆ ಕಾನ್ ಕ್ಲೇವ್’ ನಲ್ಲಿ ಮಾತನಾಡುವಾಗ ಹೇಳಿದರು.

ಡಾ. ಜೈಶಂಕರ ಇವರು ಮಾತನ್ನು ಮುಂದುವರೆಸುತ್ತಾ, ಸಧ್ಯಕ್ಕೆ ಎರಡೂ ದೇಶಗಳ ಸೈನಿಕರು ಕೆಲವು ಪ್ರದೇಶಗಳಿಂದ ಹಿಂದಕ್ಕೆ ಸರಿದಿದ್ದಾರೆ ಮತ್ತು ಕೆಲವು ವಿಷಯಗಳ ಮೇಲೆ ಚರ್ಚೆಯೂ ನಡೆಯುತ್ತಿದೆ. ನಾವು ಚೀನಾದೇಶಕ್ಕೆ ಶಾಂತಿಯನ್ನು ನಾವು ಭಂಗಗೊಳಿಸುವುದಿಲ್ಲ, ನೀವು ಒಪ್ಪಂದವನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಭಾರತದಲ್ಲಿ ಜಿ-20 ದೇಶಗಳ ಕೆಲವು ವಾರಗಳ ಹಿಂದೆ ನಡೆದ ವಿದೇಶಾಂಗ ಸಚಿವರ ಸಭೆಯಲ್ಲಿ ಚೀಣಾ ವಿದೇಶಾಂಗ ಸಚಿವ ಕಿನ್ ಗ್ಯಾಂಗ ಇವರೊಂದಿಗೆ ಸಧ್ಯದ ಗಡಿಯ ಮೇಲಿನ ಪರಿಸ್ಥಿತಿಯ ವಿಷಯದಲ್ಲಿ ಚರ್ಚಿಸಲಾಗಿತ್ತು. ಎಂದು ತಿಳಿಸಿದರು