ಶಸ್ತ್ರಾಸ್ತ್ರ ಸಹಿತ ೧೦ ಸಹಚರರ ಬಂಧನ !
ಅಮೃತಸರ – ಪಂಜಾಬ್ ಪೊಲೀಸರು ಖಲಿಸ್ತಾನಿ ಬೆಂಬಲಿಗ ಮತ್ತು ‘ವಾರೀಸ್ ಪಂಜಾಬ ದೇ’ ಈ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹನನ್ನು ೬ ಸಹಚರರ ಸಹಿತ ಜಾಲಂಧರದ ನಕೊದರ ಪ್ರದೇಶದಿಂದ ಬಂಧಿಸಿದ್ದಾರೆ. ಅವನಿಂದ ಬೃಹತ್ಪಮಾಣದಲ್ಲಿ ಶಸ್ತ್ರಾಸ್ತ್ರಗಳು ವಶಪಡಿಸಿಕೊಳ್ಳಲಾಗಿದೆ. ಅಜನಾಲ ಪೊಲೀಸ ಠಾಣೆಯ ಘೇರಾವ ಸಂಬಂಧಿಸಿದ ಆರೋಪದಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆತನ ಬಂಧನದ ನಂತರ ರಾಜ್ಯದಲ್ಲಿ ಇಂಟರ್ನೆಟ್ ಸೇವೆ ೨೪ ಗಂಟೆಗಳಿಗಾಗಿ ನಿಲ್ಲಿಸಲಾಗಿತ್ತು. ಹಾಗೂ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಅಮೃತಪಾಲನನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ ಎಂದು ಹೇಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಅಮೃತಪಾಲನ ಇನ್ನೂ ನಾಲ್ಕ ಜನ ಆಪ್ತರನ್ನು ಬಂಧಿಸಿರುವುದಾಗಿ ಹೇಳಲಾಗುತ್ತಿದೆ.
೧. ಅಮೃತಪಾಲ ಸಿಂಹನ ವಿರುದ್ಧ ೩ ಅಪರಾಧಗಳು ದಾಖಲಾಗಿದೆ. ಇದರಲ್ಲಿ ೨ ಅಪರಾಧ ಅಜನಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಅಮೃತಪಾಲ ಸಿಂಹನು ಮಾರ್ಚ್ ೧೮ ರಂದು ಶಾಹಾಕೋಟ ಮಲಸಿಯಾದ ಒಂದು ಕಾರ್ಯಕ್ರಮಕ್ಕಾಗಿ ಬರುತ್ತಿರುವುದು ಪೊಲೀಸರಿಗೆ ಮಾಹಿತಿ ದೊರೆಯಿತು. ಪೊಲೀಸರು ಮಾರ್ಗದಲ್ಲಿಯೇ ಅಮೃತಪಾಲ ಇವನ ವಾಹನಗಳನ್ನು ಸುತ್ತುವರೆದರು. ಆ ಸಮಯದಲ್ಲಿ ಅಮೃತಪಾಲ ಅಲ್ಲಿಂದ ಪರಾರಿಯಾದನು. ಆದರೆ ಅವನ ಸಹಚರರನ್ನು ಪೊಲೀಸರು ಬಂಧಿಸಿದರು. ಪೊಲೀಸರು ೧೦೦ ವಾಹನಗಳ ಸಹಿತ ಅಮೃತ ಪಾಲನನ್ನು ಒಂದುವರೆ ಗಂಟೆ ಬೆನ್ನತ್ತಿದರು ಮತ್ತು ಅವನನ್ನು ನಕೋದರ ಪ್ರದೇಶದಲ್ಲಿ ಬಂಧಿಸಿದರು.
೨. ಪೊಲೀಸರು ಅಮೃತಪಾಲ ಇವನ ಆಪ್ತ ಸಹಚರ ಭಗವಂತ ಸಿಂಹ ಅಲಿಯಾಸ್ ಬಾಜೆಕೆನನ್ನು ಅವರ ಮೊಘಾದಲ್ಲಿನ ಹೊಲದಲ್ಲಿ ಬಂಧಿಸಿದರು.
A massive statewide crackdown is underway to nab Amritpal Singh and his supporters in several cases. #AmritpalSingh #Khalistan #Punjab https://t.co/e90bCPK1Xs
— Republic (@republic) March 18, 2023
ಸೀಖ್ಕರನ್ನು ಗುಲಾಮನಾಗಿ ಮಾಡಲಾಗಿದೆ !’ (ಅಂತೆ) – ಅಮೃತಪಾಲ ಸಿಂಹ
ಬಂಧನದ ನಂತರ ವಾರ್ತಾ ವಾಹಿನಿಯ ಜೊತೆ ಮಾತನಾಡುವಾಗ ಅಮೃತ ಪಾಲ ಸಿಂಹನು, ಪೊಲೀಸರು ನನ್ನನ್ನು ಬಂಧಿಸುವುದಕ್ಕಾಗಿ ಅವರ ಶಕ್ತಿ ಹಾಕಬೇಕಾಯಿತು. ನಾನು ಜಾಲಂಧರಕ್ಕೆ ಕೀರ್ತನೆಗಾಗಿ ಹೋಗುವಾಗ ಬಂಧಿಸಿದ್ದಾರೆ. ಸಿಖ್ಕರನ್ನು ಗುಲಾಮನಾಗಿ ಮಾಡಿದ್ದಾರೆ, ಎಂದು ಹೇಳಿದನು.
ಅಮೃತಪಾಲನನ್ನು ಬಂಧಿಸುವುದು ಮೊದಲನೆಯ ಹಂತವಾಗಿದೆ. ಅವನಿಗೆ ಜಾಮೀನು ದೊರೆಯಬಾರದು ಮತ್ತು ಅವನ ಮೇಲೆ ಶೀಘ್ರ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವನಿಗೆ ಕಠಿಣ ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನ ಮಾಡುವುದು ಇದು ಎರಡನೆಯ ಹಂತವಾಗಬೇಕು. ಹಾಗೂ ಅವನಿಗೆ ಪಂಜಾಬನ ಜೈಲಿನಲ್ಲಿ ಇಡದೆ ಈಶಾನ್ಯ ಭಾರತ ಅಥವಾ ದಕ್ಷಿಣ ಭಾರತದ ಜೈಲಿನಲ್ಲಿ ಇರಿಸಬೇಕು ! ಅವನ ಸಂಘಟನೆಯನ್ನು ನಿಷೇಧಿಸಬೇಕು.
ಸಂಪಾದಕರ ನಿಲುವು* ಖಲಿಸ್ತಾನಿಯರ ಚಟುವಟಿಕೆ ಹತ್ತಿಕ್ಕಲು ಈಗ ಅಷ್ಟಕ್ಕೆ ನಿಲ್ಲಿಸದೆ ಪಂಜಾಬ, ದೇಶದಲ್ಲಿನ ಇತರ ಭಾಗದಲ್ಲಿನ ಮತ್ತು ವಿದೇಶದಲ್ಲಿನ ಖಲಿಸ್ತಾನಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಪ್ರಯತ್ನ ಮಾಡುವುದು ಅವಶ್ಯಕ ! |