ಸರಾಯಿಯ ಪ್ರತಿಯೊಂದು ಬಾಟಲಿಯ ಮೇಲೆ ೧೦ ರೂಪಾಯಿ ಗೋಮಾತಾ ತೆರಿಗೆ ವಿಧಿಸಲಾಗುವುದು !

ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಸರಕಾರದ ನಿರ್ಧಾರ !

ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವು ಸರಾಯಿ ಮಾರಾಟದ ಪ್ರತಿಯೊಂದು ಬಾಟಲಿಯ ಮೇಲೆ ಹತ್ತು ರೂಪಾಯಿ ‘ಗೋಮಾತಾ ತೆರಿಗೆ’ ವಿಧಿಸಲಾಗುವುದೆಂದು ರಾಜ್ಯದ ಬಜೆಟಿನಲ್ಲಿ ಘೋಷಣೆ ಮಾಡಿದ್ದಾರೆ. ಇದರಿಂದ ಸರಕಾರಕ್ಕೆ ಪ್ರತಿ ವರ್ಷ ೧೦೦ ಕೋಟಿ ರೂಪಾಯ ತೆರಿಗೆ ಸಿಗುವ ಸಾಧ್ಯತೆ ಇದೆ.

ಸಂಪಾದಕರ ನಿಲುವು

* ಹೀಗೆ ಹೆಚ್ಚಿನ ತೆರಿಗೆ ವಿಧಿಸಿ ಹಣ ಸಂಗ್ರಹಿಸುವ ಜೊತೆಗೆ ಸರಕಾರ ಗೋರಕ್ಷಣೆಗಾಗಿ ವಿಶೇಷ ವ್ಯವಸ್ಥೆ ಮಾಡುವುದು ಕೂಡ ಅವಶ್ಯಕವಾಗಿದೆ !