ರಂಜಾನ್ ಸಂದರ್ಭದಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಬಿಹಾರ ಸರಕಾರದಿಂದ ವಿಶೇಷ ರಿಯಾಯಿತಿ !

ಭಾಜಪದಿಂದ ಟೀಕೆ

ಪಾಟಲಿಪುತ್ರ – ಬಿಹಾರ ಸರಕಾರದಿಂದ ರಂಜಾನ ಪ್ರಯುಕ್ತ ಮುಸಲ್ಮಾನ ಸಿಬ್ಬಂದಿಗಳಿಗೆ ವಿಶೇಷ ರಿಯಾಯತಿ ನೀಡಿದೆ. ಸರಕಾರವು ರಂಜಾನ್ ತಿಂಗಳಲ್ಲಿ ಮುಸಲ್ಮಾನ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಲಸದ ಅವಧಿಯ ಒಂದು ಗಂಟೆ ಮುಂಚಿತವಾಗಿ ಬಂದು ಒಂದು ಗಂಟೆ ಬೇಗನೆ ಹೋಗುವ ರಿಯಾಯತಿ ನೀಡಿದೆ. ಇನ್ನು ಮುಂದೆ ಇದೇ ರೀತಿ ಪ್ರತಿವರ್ಷ ರಿಯಾಯತಿ ನೀಡಲಾಗುವುದು. ಸರಕಾರವು ಈ ಕುರಿತು ಸುತ್ತೋಲೆ ಕೂಡ ಹೊರಡಿಸಿದೆ. ‘ನಮ್ಮ ಸರಕಾರದ ಈ ನಿರ್ಧಾರ ಜಾತ್ಯತೀತತೆಯನ್ನು ಗಟ್ಟಿಗೊಳಿಸಲಿದೆ’, ಎಂದು ಅಧಿಕಾರದಲ್ಲಿರುವ ಜನತಾದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾದಳ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ಈ ಕುರಿತು ಭಾಜಪದ ನಾಯಕ ಅರವಿಂದ ಕುಮಾರ ಸಿಂಹ ಇವರು ‘ಮುಖ್ಯಮಂತ್ರಿ ನಿತೀಶ ಕುಮಾರ ಇವರು ಚೈತ್ರನವರಾತ್ರಿ ಮತ್ತು ಶ್ರೀ ರಾಮನವಮಿಯ ಪ್ರಯುಕ್ತ ನೀಡಬೇಕೆಂದು’ ಒತ್ತಾಯಿಸಿದ್ದಾರೆ.

ಸಂಪಾದಕರ ನಿಲುವು

* ಧರ್ಮದ ಆಧಾರದಲ್ಲಿ ಸರಕಾರಿ ಸಿಬ್ಬಂದಿಗೆ ರಿಯಾಯತಿ ನೀಡುವುದು, ಇದು ಜಾತ್ಯಾತೀತ ವ್ಯವಸ್ಥೆಯಲ್ಲಿ ಅಡಕವಾಗಿದೆಯೇ ? ಜಾತ್ಯಾತೀತವಾದಿಗಳು ಈಗ ಮೌನ ಏಕೆ ? ಅಥವಾ ಸರಕಾರದ ಈ ನಿರ್ಧಾರ ಅವರಿಗೂ ಒಪ್ಪಿಗೆ ಇದೆಯೇ ?