ಪ್ರಧಾನಮಂತ್ರಿಗಳ ಕಚೇರಿಯ ಅಧಿಕಾರಿ ಎಂದು ಹೇಳಿ ಕಾಶ್ಮೀರದಲ್ಲಿ ಪಂಚತಾರೆಯ ಸೌಲಭ್ಯಗಳನ್ನು ಅನುಭವಿಸುವ ವಂಚಕನ ಬಂಧನ

ಶ್ರೀನಗರ (ಜಮ್ಮೂ-ಕಾಶ್ಮೀರ) – ಪ್ರಧಾನಮಂತ್ರಿಗಳ ಕಾರ್ಯಾಲಯದ ಹೆಚ್ಚುವರಿ ಸಂಚಾಲಕನಾಗಿರುವುದಾಗಿ ಹೇಳಿ ಝಡ್‌ ಪ್ಲಸ್‌ ಸುರಕ್ಷಾ ವ್ಯವಸ್ಥೆ, ಬುಲೆಟ್‌ ಪ್ರೂಫ್ ಗಾಡಿ, ಪಂಚತಾರಾಂಕಿತ ಸೌಲಭ್ಯಗಳನ್ನು ಪಡೆದ ಕಿರಣ ಭಾಯಿ ಪಟೇಲ ಎಂಬ ವಂಚಕನನ್ನು ಜಮ್ಮೂ-ಕಾಶ್ಮೀರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪಟೇಲನ ಬಗ್ಗೆ ಸಂಶಯ ಉಂಟಾಗಿದ್ದರಿಂದ ಪೊಲೀಸರು ಅವನ ವಿಚಾರಣೆ ನಡೆಸಿದಾಗಿ ಅವನು ನಕಲಿ ಅಧಿಕಾರಿಯಾಗಿರುವುದು ಬಹಿರಂಗವಾಗಿದೆ. ಅವನನ್ನು ೧೦ ದಿನಗಳ ಹಿಂದೆ ಬಂಧಿಸಲಾಗಿದ್ದರೂ ಈ ಮಾಹಿತಿಯನ್ನು ಗುಪ್ತವಾಗಿಡಲಾಗಿತ್ತು.

ಪಟೇಲನು ತನ್ನ ಟ್ವಿಟರ ಖಾತೆಯಲ್ಲಿ ತಾನು ಪಿ.ಎಚ್‌.ಡಿ. ಮಾಡಿರುವುದಾಗಿ ಬರೆದಿದ್ದನು. ಪಟೇಲನು ಫೆಬ್ರುವರಿಯಲ್ಲಿ ಕಾಶ್ಮೀರದ ಪ್ರವಾಸ ಮಾಡಿದ್ದನು ಹಾಗೂ ಎಲ್ಲ ಸರಕಾರಿ ಸೌಲಭ್ಯಗಳ ಲಾಭ ಪಡೆದಿದ್ದನು. ಈ ಪ್ರವಾಸದ ಅನೇಕ ವಿಡಿಯೋಗಳನ್ನು ಟ್ವಿಟರನಲ್ಲಿ ಪ್ರಸಾರ ಮಾಡಿದ್ದನು. ಗುಪ್ತಚರರು ಈ ಬಗ್ಗೆ ಜಾಗೃತಗೊಳಿಸಿದ್ದರಿಂದ ಪೊಲೀಸರು ಆತನ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದರು.

ಸಂಪಾದಕೀಯ ನಿಲುವು

ಇದರಿಂದ ಸರಕಾರಿ ವ್ಯವಸ್ಥೆಯು ಎಷ್ಟೊಂದು ಕುರುಡಾಗಿ ಕೆಲಸ ಮಾಡುತ್ತದೆ, ಎಂಬುದು ಸ್ಪಷ್ಟವಾಗುತ್ತದೆ ! ಇದರಿಂದಲೇ ಜಗತ್ತಿನಲ್ಲಿ ಭಾರತೀಯ ವ್ಯವಸ್ಥೆಯು ಹಾಸ್ಯಾಸ್ಪದವೆನಿಸುತ್ತದೆ !