ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ತೆಗೆದುಕೊಳ್ಳುವಾಗ ಪರಮಾಣು ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ – ಪಾಕಿಸ್ತಾನ

ಪಾಕಿಸ್ತಾನ ಹಣಕಾಸು ಸಚಿವ ಇಶಾಕ್ ದರ್

ಇಸ್ಲಾಮಾಬಾದ (ಪಾಕಿಸ್ತಾನ) – ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ತೆಗೆದುಕೊಳ್ಳುವಾಗ ಪರಮಾಣು ಸಂದರ್ಭದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹಣಕಾಸು ನಿಧಿಯೊಂದಿಗೆ ಮಾಡಿಕೊಳ್ಳುವ ಒಪ್ಪಂದವನ್ನು ಸರಕಾರಿ ಸಂಕೇತ ಸ್ಥಳದಲ್ಲಿ ಅಪ್ ಲೋಡ ಮಾಡಲಾಗುವುದು. ಅದನ್ನು ಜನರು ನೋಡಬಹುದು. ಪರಮಾಣು ಬಗ್ಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಪಾಕಿಸ್ತಾನ ಹಣಕಾಸು ಸಚಿವ ಇಶಾಕ ಡಾರ ಇವರು ಸಂಸತ್ತಿನಲ್ಲಿ ಶಾಸಕ ರಝಾ ರಬ್ಬಾನಿ ಇವರ ಪ್ರಶ್ನೆಗೆ ಉತ್ತರಿಸಿದರು.

ಹಣಕಾಸು ಸಚಿವರ ಇಶಾಕ ಡಾರ ಇವರು, ನಾವು ಪಾಕಿಸ್ತಾನ ಜನತೆಯನ್ನು ಪ್ರತಿನಿಧಿಸುತ್ತೇವೆ, ನಾವು ಜನರ ಹಿತದ ರಕ್ಷಣೆಗಾಗಿ ನಿರಂತರವಾಗಿ ಕಾರ್ಯ ಮಾಡುತ್ತಿದ್ದೇವೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಜನತೆಯ ಅಹಿತವಾಗುವಂತಹ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲವೆಂದು ಹೇಳಿದರು.

ಸಂಪಾದಕರ ನಿಲುವು

* ಪಾಕಿಸ್ತಾನಿಯರ ಬಳಿ ಒಂದು ಹೊತ್ತಿನ ಊಟಕ್ಕೂ ಕಠಿಣವಾಗಿದೆ; ಆದರೆ ಇಲ್ಲಿಯ ರಾಜ್ಯಕರ್ತರಿಗೆ ಅಣುಬಾಂಬ ಬೇಕಾಗಿದೆ. ಜನತೆಯೂ ಇದನ್ನು ವಿರೋಧಿಸುವುದಿಲ್ಲ. ಇದರಿಂದ ಅವರ ನೈಜ ಮಾನಸಿಕತೆ ಗಮನಕ್ಕೆ ಬರುತ್ತದೆ. ಇಂತಹವರಿಗೆ ಯಾರಾದರೂ ಸಹಾಯ ಮಾಡುವುದೆಂದರೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ !