ಜಾಗತಿಕ ಭಯೋತ್ಪಾದನಾ ಸಂಘಟನೆಯ ಸೂಚ್ಯಾಂಕದಲ್ಲಿ ಭಾರತದ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)’ ೧೨ ನೇ ಸ್ಥಾನ !

ಜಾಗತಿಕ ಸೂಚ್ಯಂಕ 2022

ನವ ದೆಹಲಿ – ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ‘ಇನ್ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್’ವು ಭಯೋತ್ಪಾದಕ ಚಟುವಟಿಕೆಯ ಸಂದರ್ಭದಲ್ಲಿ ‘ಗ್ಲೊಬಲ್ ಟೆರೇರಿಜಮ್ ಇಂಡೆಕ್ಸ್ ೨೦೨೨’ (ಜಾಗತಿಕ ಭಯೋತ್ಪಾದಕ ಸೂಚ್ಯಾಂಕ ೨೦೨೨) ಅಡಿಯಲ್ಲಿ ೨೦ ಮುಖ್ಯ ಭಯೋತ್ಪಾದಕ ಸಂಘಟನೆಯ ಸುಚಿ ಪ್ರಕಟಗೊಳಿಸಿದೆ. ಇದರಲ್ಲಿ ಭಾರತದ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)’ ೧೨ ನೇ ಸ್ಥಾನದಲ್ಲಿದೆ; ಆದರೆ ಇದರಲ್ಲಿ ಅದು ಮಾವೋವಾದಿ ಇದೆ ಅಥವಾ ರಾಜಕೀಯ ಪಕ್ಷ ಇರುವುದು ? ಇದು ಸ್ಪಷ್ಟವಾಗಿ ಹೇಳಲಾಗಿಲ್ಲ. ಮಾವೋವಾದಿ ಕಮ್ಯುನಿಸ್ಟ್ ಪಾರ್ಟಿ ನಕ್ಸಲವಾದಿ ಚಟುವಟಿಕೆ ಮಾಡುತ್ತದೆ. ಆದ್ದರಿಂದ ಅದು ಮಾವೋವಾದಿ ಕಮ್ಯುನಿಸ್ಟ್ ಪಾರ್ಟಿ ಎಂದು ಹೇಳಿದ್ದಾರೆ. ೨೦೦೪ ರಲ್ಲಿ ಸಿಪಿಐ-ಎಂಎಲ್, ಮಾವೊಈಸ್ಟ್ ಕಮ್ಯುನಿಸ್ಟ್ ಸೆಂಟರ್ ಮತ್ತು ಪೀಪಲ್ಸ್ ಫಾರ್ ಗ್ರೂಪ್ ಇವರು ಒಟ್ಟಾಗಿ ಸೇರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಈ ಸಂಘಟನೆ ಸ್ಥಾಪಿಸಿದ್ದರು. ಈ ಸಂಘಟನೆಯನ್ನು ೨೦೦೯ ರಲ್ಲಿ ಭಾರತದಲ್ಲಿ ನಿಷೇಧಿಸಲಾಗಿದೆ. ೨೦೨೨ ರಲ್ಲಿ ಈ ಸಂಘಟನೆಯಿಂದ ೬೧ ದಾಳಿ ನಡೆದವು. ಇದರಲ್ಲಿ ೩೯ ಜನರು ಸಾವನ್ನಪ್ಪಿದರು ಹಾಗೂ ೩೦ ಕ್ಕೂ ಹೆಚ್ಚಿನ ಜನರು ಗಾಯಗೊಂಡರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಈ ಸಂಘಟನೆಯು ತತ್ಕಾಲಿಕ ಮುಖ್ಯಸ್ಥ ವಿನೋದ್ ಮಿಶ್ರಾ ಇವರ ನೇತೃತ್ವದಲ್ಲಿ ಬಿಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಂಸಾಚಾರ ನಡೆಸಿತ್ತು. ಆದ್ದರಿಂದ ನಂತರ ರಣವೀರ ಸೇನೆ ಉದಯವಾಯಿತು. ಈಗ ಬಿಹಾರ ಮತ್ತು ಜಾರ್ಖಂಡ ರಾಜ್ಯಗಳಲ್ಲಿ ಮಾವೋವಾದಿ ಸಂಘಟನೆ ಸಕ್ರಿಯವಾಗಿದೆ.

ಸಂಪಾದಕರ ನಿಲುವು

* ಹಿಂಸಾಚಾರ, ಹತ್ಯೆ, ಸುಲಿಗೆ ಇದೇ ಮಾರ್ಕ್ಸ್ ವಾದಿಗಳ ಅಂತರರಾಷ್ಟ್ರೀಯ ಮಟ್ಟದಲ್ಲಿದೆ. ಆದ್ದರಿಂದಲೇ ಅದು ರಷ್ಯಾದಲ್ಲಿ ನಾಶವಾಯಿತು ಮತ್ತು ಭಾರತದಲ್ಲಿ ಕೂಡ ಕೆಲವು ಸ್ಥಳಗಳಲ್ಲಿ ಸೀಮಿತವಾಗಿ ಉಳಿದಿದೆ. ಭವಿಷ್ಯದಲ್ಲಿ ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಶವಾಗುವುದು ಇದರಲ್ಲಿ ಅನುಮಾನವಿಲ್ಲ !